ವಿದ್ಯಾರ್ಥಿನಿ ಮಧು ಸಾವು ಪ್ರಕರಣ: Major Breakthrough.. ಆರೋಪಿಗೆ ನೆರವಾದ ಪೇದೆ ಸಸ್ಪೆಂಡ್..!

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅಸಹಜ ಸಾವು ಪ್ರಕರಣಕ್ಕೆ ಮೇಜರ್​ ಬ್ರೇಕ್​ಥ್ರೂ ಸಿಕ್ಕಿದೆ. ಹತ್ಯಾ ಆರೋಪಿಯ ಸುತ್ತ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಆಘಾತಕಾರಿ ಸಂಗತಿಯೆಂದ್ರೆ ಕಾನೂನು ಪಾಲಿಸಬೇಕಾದ ಪೇದೆಯೇ ಆರೋಪಿಗೆ ನೆರವು ನೀಡಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗೆ ಕುಕೃತ್ಯದಲ್ಲಿ ನೆರವಾದ ಆರೋಪದ ಮೇಲೆ ನಗರದ ಪೇದೆಯೊಬ್ಬನನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಆತಂಕದ ವಿಷಯವೆಂದ್ರೆ ಈ ಪೇದೆಯು ಸಂಬಂಧದಲ್ಲಿ, ಆರೋಪಿಯ ಮಾವನಾಗಿದ್ದಾನೆ!

ಆಂಜನೇಯ, ಅಮಾನತುಗೊಂಡ ಪೇದೆ. ಈತ ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಪೇದೆಯು ಆರೋಪಿ ಸುದರ್ಶನ್ ಯಾದವ್​ನ ಮಾವ. ಈತ ಮೃತಳ ಮೊಬೈಲ್ ಹಾಗೂ ವಾಹನದ ಕೀಯನ್ನು ಆರೋಪಿಯ ಮನೆಗೆ ತಲುಪಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ಅವರು ಪೇದೆ ಆಂಜನೇಯನನ್ನು ತಕ್ಷಣವೇ ಅಮಾನತುಗೊಳಿಸಿ ಆದೇಶಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv