ಬಟರ್‌ಫ್ಲೈ ಪ್ರಚಾರಕ್ಕಾಗಿ ಚಿಟ್ಟೆಯಾದ ಪಾರುಲ್..!

ನಟಿ ಪಾರುಲ್ ಯಾದವ್ ಇನ್ನೇನು ಕೆಲವೇ ದಿನಗಳಲ್ಲಿ ಬಟರ್‌ಫ್ಲೈ ಆಗಿ ಬೆಳ್ಳಿತೆರೆಮೇಲೆ ಹಾರಾಡಲಿದ್ದಾರೆ. ಈ ಹೊತ್ತಲ್ಲೇ ಫುಲ್ ಕಲರ್‌ಫುಲ್ ಬಟ್ಟೆ ತೊಟ್ಟು ನವರಂಗಿ ಚಿಟ್ಟೆಯಾಗಿ ಫೋಟೋಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ವಿವಿಧ ಬಣ್ಣಗಳಿರೋ ಲಾಂಗ್‌ ಗೌನ್ ತೊಟ್ಟು ಅದರ ಮೇಲೆ ಚಿಟ್ಟೆಯಂತಾ ಓವರ್‌ಕೋಟ್ ಧರಿಸಿ ಗಂಭೀರ ವದನೆಯಾಗಿ ಪೋಸ್ ಕೊಟ್ಟಿದ್ದಾರೆ. ಅಂದ್ಹಾಗೆ ಪಾರುಲ್ ರಿಯಲ್ ಚಿಟ್ಟೆಯಾಗಿರೋದು ಅವರೇ ನಟಿಸಿ ಸಹನಿರ್ಮಾಣವೂ ಮಾಡಿರೋ ಬಟರ್‌ಫ್ಲೈ ಚಿತ್ರದ ಪ್ರಚಾರಕ್ಕಾಗಿ.


ಹಿಂದಿಯಲ್ಲಿ ತೆರೆಕಂಡು ಹಿಟ್ ಆದ ಕ್ವೀನ್ ಚಿತ್ರವನ್ನ ರಮೇಶ್ ಅರವಿಂದ್, ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ರಿಮೇಕ್ ಮಾಡಿದ್ದಾರೆ. ಕನ್ನಡದಲ್ಲಿ ‘ಬಟರ್ ಫ್ಲೈ’ ಆಗಿ ಪಾರುಲ್‌ ನಟಿಸಿದ್ದು ಸಾಕಷ್ಟು ಸುದ್ದಿ ಮಾಡಿದೆ. ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ‘ಬಟರ್ ಫ್ಲೈ’ ಸಿನಿಮಾ ಒಂದೂ ಕಟ್ ಇಲ್ಲದೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಪಡೆದಿದ್ದು ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಹಾರಿ ಬಂದು ಮುದ ನೀಡಲಿದೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv