ಗಿಣಿಯನ್ನ ಅರೆಸ್ಟ್ ಮಾಡಿದ್ರು ಬ್ರೆಜಿಲ್ ಪೊಲೀಸರು..!

ಬ್ರೆಜಿಲ್​: ಗಿಣಿಗಳು ಶಾಸ್ತ್ರ ಹೇಳೋದನ್ನ ಕೇಳಿರಬಹುದು. ಜೊತೆಗೆ ಅದಕ್ಕೆ ಸರಿಯಾಗಿ ಟ್ರೇನಿಂಗ್ ಕೊಟ್ರೆ ಅದು ಮನುಷ್ಯರಿಗಿಂತ ಚುರುಕಾಗಿ ಮಾತಾಡುತ್ತೆ ಅನ್ನೋದು ಕೂಡ ಗೊತ್ತಿರಬಹುದು. ಆದ್ರೆ, ಬ್ರೆಜಿಲ್​ನಲ್ಲಿ ಹೀಗೆ ಒಳ್ಳೆ ಟ್ರೇನಿಂಗ್ ಪಡೆದಿದ್ದ ಗಿಣಿ, ತನ್ನ ಮಾಲೀಕರಿಗೆ ನಿಷ್ಠೆಯಿಂದ ಇರೋಕೆ ಹೋಗಿ ಇದೀಗ ಕಂಬಿ ಎಣಿಸುತ್ತಿದೆ.

ಡ್ರಗ್ಸ್​, ಕೋಕೆನ್​ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಶಂಕಿತರನ್ನ ಬಂಧಿಸಲು ಬ್ರೆಜಿಲ್​ನ ಪೊಲೀಸ್​ ತಂಡ ಪಿಯಾಯಿ ಪ್ರದೇಶಕ್ಕೆ ಬಂದಿರುತ್ತಾರೆ. ಪೊಲೀಸರು ಆರೋಪಿಗಳನ್ನ ಬಂಧಿಸಲು ಎಲ್ಲ ತಯಾರಿ ಮಾಡಿಕೊಂಡು ಆರೋಪಿಗಳಿರುವ ಮನೆಯೊಳಗೆ ನುಗ್ಗುತ್ತಾರೆ. ಈ ವೇಳೆ ಮನೆಯ ಸಣ್ಣ ಕಿಟಕಿಯಿಂದ ಪೊಲೀಸರನ್ನ ನೋಡಿದ ಗಿಣಿ ಮಮ್ಮಿ ಪೊಲೀಸಿಯಾ.. ಮಮ್ಮಿ ಪೊಲೀಸಿಯಾ… ಅಂತ ಕೂಗಿಕೊಂಡಿದೆ.

ಗಿಣಿರಾಮ ಹಿಂಟ್ ಕೊಟ್ರೂ ಖದೀಮರಿಗೆ ತಪ್ಪಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಮನೆಯಿಂದ ಎಸ್ಕೇಪ್ ಆಗ್ತಿದ್ದ ಒರ್ವ ವ್ಯಕ್ತಿ ಹಾಗೂ ಮತ್ತೊಬ್ಬ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ತಮ್ಮ ರೇಡ್​ಗೆ ಡಿಸ್ಟರ್ಬ್ ಮಾಡಿದ ಗಿಣಿಯನ್ನೂ ಎತ್ತಾಕಿಕೊಂಡು ಹೋಗಿದ್ದಾರೆ. ಪೊಲೀಸ್ ಸ್ಟೇಷನ್​ನಲ್ಲಿ ಗಿಣಿಯನ್ನೂ ವಿಚಾರಣೆ ನಡೆಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದ್ರೆ, ಆ ಗಿಣಿ ಮಾತ್ರ ಅಲ್ಲಿ ತುಟಿಪಿಟಿಕ್ ಅಂದಿಲ್ಲವಂತೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv