ಗುಣಮುಖರಾಗಿ ಬರ್ತಿದ್ದಾರೆ ಗೋವಾ ಸಿಎಂ

ಪಣಜಿ:ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ ಇಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಅಮೆರಿಕಾದಿಂದ ಮುಂಬೈಗೆ ಬಂದು, ಮುಂಬೈಯಿಂದ ಗೋವಾದ ಪಣಜಿಗೆ ಬರಲಿದ್ದಾರೆ ಎಂದು ಗೋವಾ ಸಿಎಂ ಕಾರ್ಯಾಲಯ ತಿಳಿಸಿದೆ.

ಚಿಕಿತ್ಸೆಗೆ ತೆರಳುವ ಮೊದಲು ಪರಿಕ್ಕರ್ ತನ್ನ ಅನುಪಸ್ಥಿತಿಯಲ್ಲಿ ಸರ್ಕಾರಕ್ಕೆ ಸಲಹೆ ಸೂಚನೆ ನೀಡಲು ಕ್ಯಾಬಿನೆಟ್ ಸಲಹೆಗಾರರ ಸಮಿತಿಯನ್ನು ರಚಿಸಿದ್ದರು. 3 ತಿಂಗಳುಗಳ ಕಾಲ ಅಮೆರಿಕಾದಲ್ಲಿದ್ದುಕೊಂಡೇ ಗೋವಾ ಸರ್ಕಾರದ ಬಗ್ಗೆ ಮಾಹಿತಿಯನ್ನು ಸಹ ಪಡೆದುಕೊಳ್ಳುತ್ತಿದ್ದರು. ಪಣಜಿಗೆ ಬಂದ ನಂತರ ಜೂನ್ 15 ರಂದು ಗೋವಾದ ಮಾನ್ಸೂನ್ ಆಧೀವೇಶನಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಭೆಯೊಂದನ್ನು ನಡೆಸಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv