ಫೆ. 25ರೊಳಗೆ ಹಾಜರಾಗಲು ಟ್ವಿಟರ್​ ಸಿಇಒ ಜಾಕ್​ ಡೋರ್ಸೆಗೆ ಸಮನ್ಸ್​..!

ನವದೆಹಲಿ: ಇದೇ ತಿಂಗಳ 25ರ ಒಳಗೆ ಮಾಹಿತಿ ಮತ್ತು ತಂತ್ರಜ್ಞಾನದ ಸಂಸದೀಯ ಸಮಿತಿ​ಯ ಮುಂದೆ ಹಾಜರಾಗುವಂತೆ ಟ್ವಿಟರ್​ ಸಿಇಒ ಜಾಕ್​ ಡೋರ್ಸೆಗೆ ಸಮನ್ಸ್​ ಜಾರಿಮಾಡಲಾಗಿದೆ. ಸೋಮವಾರ ಸಮಿತಿಯ ಮುಂದೆ ಹಾಜರಾಗುವಂತೆ ಜಾಕ್​ ಡೋರ್ಸೆಗೆ ತಿಳಿಸಿತ್ತು. ಆದರೆ ಡೋರ್ಸೆ ಗೈರಾದ ಹಿನ್ನೆಲೆ ಸಮಿತಿ ಸದಸ್ಯರು ಕಠಿಣ ಕ್ರಮ ಕೈಗೊಂಡಿರುವುದಾಗಿ ಸಮಿತಿಯ ಮುಖ್ಯಸ್ಥ ಅನುರಾಗ್​ ಠಾಕೂರ್​ ತಿಳಿಸಿದ್ದಾರೆ.

ಇನ್ನೂ ಸಮಿತಿಯ ಜೊತೆ ಮಾತುಕತೆಗೆ ಡೋರ್ಸೆ ಬದಲಿಗೆ ಟ್ವಿಟರ್​​​ ಇಂಡಿಯಾದ ಪ್ರತಿನಿಧಿಗಳು ಆಗಮಿಸಿದ್ರು. ಆದ್ರೆ ಅವರನ್ನು ನಾವು ಮಾತುಕತೆಗೆ ಕರೆದಿಲ್ಲಾ ಅಂತ, ಸಂಸದೀಯ ಸಮಿತಿ ವಾಪಸ್ ಕಳುಹಿಸಿದೆ. ಜಾಕ್​ ಡೋರ್ರ್ಸೆ ಸಮಯದ ಅಭಾವದ ಕಾರಣ ನೀಡಿ ಮೀಟಿಂಗ್​ಗೆ ಹಾಜರಾಗಿರಲಿಲ್ಲ. ಹೀಗಾಗಿ ಸಮನ್ಸ್​ ನೀಡಿರುವ ಸಮಿತಿ ಇದೇ ತಿಂಗಳ 25ರ ಒಳಗೆ ಹಾಜರಾಗುವಂತೆ ತಿಳಿಸಿದೆ. ಟ್ವಿಟರ್​ನಲ್ಲಿ ಬಳಕೆದಾರರ ಖಾಸಗಿ ಮಾಹಿತಿಯ ಭದ್ರತೆ ಹಾಗೂ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣದಿಂದ ಆಗಬಹುದಾದ ತೊಂದರೆಗಳನ್ನು ತಡೆಯಲು ಟ್ವಿಟರ್​ ಅಧಿಕಾರಿಗಳಿಗೆ ಬುಲಾವ್​ ನೀಡಿತ್ತು. ಕೇಂದ್ರ ಸರ್ಕಾರ ಕೂಡ ಸಾಮಾಜಿಕ ಜಾಲತಾಣಗಳ ವಿರುದ್ಧ ಚಾಟಿ ಬೀಸಿದ್ದು, ಚುನಾವಣಾ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ ಎಂದಿತ್ತು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv