ಹೆಲಿಕಾಪ್ಟರ್​ನಲ್ಲಿ ಕೈದಿಯ ಮಹಾಪಲಾಯನ..ಎಲ್ಲೂ ಕೇಳಿರಲ್ಲ ಈ ಸ್ಟೋರಿ!

ಪ್ರಾನ್ಸ್​​: ಸಾಮಾನ್ಯವಾಗಿ ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳೋಕೆ ಗೋಡೆ ಹಾರೋದು ಕಾಮನ್​. ಆದರೆ ಇಲ್ಲೊಬ್ಬ ಮಹಾನ್​ ಕಳ್ಳ, ಹಾಲಿವುಡ್​ ಸಿನಿಮಾಗಳ ಪ್ರೇರಣೆಯಿಂದ ಹೆಲಿಕಾಪ್ಟರ್​ ಬಳಸಿ ಎಸ್ಕೇಪ್​ ಆಗಿದ್ದಾನೆ. ಫ್ರಾನ್ಸ್​ನ ರಿಡೊಯಿನ್​ ಫಯ್ಡ್ ಎಂಬಾತ ಆ ಕುಖ್ಯಾತ ಕಳ್ಳ.
ಇಲ್ಲಿನ ರಿಯ್ಯುನಲ್ಲಿರುವ ಜೈಲಿನಿಂದ ಶಸ್ತ್ರಸಜ್ಜಿತ ಆಗುಂತಕರ ಸಹಾಯದಿಂದ ಈತ ಹೆಲಿಕಾಪ್ಟರ್​ನ್ನ ಬಳಸಿ ಪರಾರಿಯಾಗಿದ್ದಾನೆ. ಇದೆ ನಗರದ ಹೊರವಲಯದಲ್ಲಿ ಹೆಲಿಕಾಪ್ಟರ್​ ಪತ್ತೆಯಾಗಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ಹೈಅಲರ್ಟ್​ ಘೋಷಿಸಿದ್ದಾರೆ.
ಇನ್ನು ಈತ ತಪ್ಪಿಸಿಕೊಳ್ತಿರುವುದು ಇದೆ ಮೊದಲಲ್ಲ. ಗ್ಯಾಂಗ್​ವಾರ್ ಹಾಗೂ ಶಸ್ತ್ರಸಜ್ಜಿತ ದಾಳಿ ನಡೆಸಿದ ದರೋಡೆ ನಡೆಸ್ತಿದ್ದ ಈತ 25 ವರ್ಷಗಳ ಕಾಲ ಶಿಕ್ಷೆ ಗುರಿಯಾಗಿದ್ದ. ಈ ಮೊದಲು 2013 ರಲ್ಲಿ ಫಯ್ಡ್​ ತನ್ನ ಜೈಲಿನ ಸೆಲ್​ನ ಗೋಡೆಯನ್ನೇ ಡೈನಮೆಟ್ ಇಟ್ಟು ಸ್ಫೋಟಿಸಿ ಪರಾರಿಯಾಗಿದ್ದ. ಅದಾದ ಆರೇ ವಾರಗಳಲ್ಲಿ ಈತನನ್ನ ಪ್ರಾನ್ಸ್​ ಪೊಲೀಸರು ಮತ್ತೆ ಜೈಲಿಗೆ ತಳ್ಳಿದ್ದರು. ಇದೀಗ ಮತ್ತೆ ತನ್ನ ಸಹಚರರನ್ನು ಬಳಸಿ ಎಸ್ಕೇಪ್​ ಆಗಿರುವ ಈತ ತನ್ನೊಂದಿಗೆ ಇತರೆ ಮೂರು ಕೈದಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾನೆ.