ಫಾರಿನ್​ನಲ್ಲಿ ಸೆಟಲ್ಡ್​​ ಅಂತಾ ಮಗಳನ್ನ ಕೊಟ್ರು, ಆದ್ರೆ ಮದುವೆ ಗಂಡಿಗೆ..!

ಬೆಂಗಳೂರು:  ಈ ನಗರ ಪ್ರದೇಶಗಳ ಪೋಷಕರಿಗೆ, ಅದ್ರಲ್ಲೂ ಬೆಂಗಳೂರಿನಂಥ ನಗರ ಪ್ರದೇಶಗಳ ಯುವತಿಯರ ತಂದೆ ತಾಯಿಗೆ, ಫಾರಿನ್ ಗಂಡು ಅಂದ್ರೆ ಅದೇನೋ ವಿಶೇಷ ಆಸಕ್ತಿ. ಅದ್ರಲ್ಲೂ ಆತ ಅಮೆರಿಕಾದಲ್ಲಿ ಡಾಲರ್​ಗಳಲ್ಲಿ ದುಡಿಯುತ್ತಿದ್ದಾನೆ ಅಂತ ಗೊತ್ತಾದರೆ ಸಾಕು, ದುಂಬಾಲು ಬಿದ್ದು ತಮ್ಮ ಮಗಳನ್ನು ಧಾರೆ ಎರೆದು ಕೊಟ್ಟು ಬಿಡ್ತಾರೆ. ಆದ್ರೆ, ಅದ್ರಲ್ಲಿ ಅದೆಷ್ಟೋ ಹಿಟ್​​ ಆಗಿದ್ರೂ, ಅಷ್ಟೇ ಸಂಖ್ಯೆಯಲ್ಲಿ ಮಿಸ್​ ಆಗಿ, ಆ ಯುವತಿಯರು ಪರದೇಶದಲ್ಲಿ ಪಡಬಾರದ ಪರಿಪಾಟಲು ಪಟ್ಟಿದ್ದಿದೆ. ಅದಕ್ಕೆ ತಾಜಾ ಉದಾಹರಣೆ ಇಲ್ಲಿದೆ..!

ಆತ ಫಾರಿನ್​ನಲ್ಲಿದ್ದಾನೆ, ಒಳ್ಳೆಯ ಕೆಲಸದಲ್ಲಿದ್ದಾನೆ, ಫಾರಿನ್​ನಲ್ಲೇ ಸೆಟಲ್​ ಆಗಿದ್ದಾನೆ ಅಂತಾ ಮಗಳನ್ನು ಕೊಟ್ಟು ಮದುವೆ ಮಾಡಿದ್ರು. ಆದ್ರೆ ಅವರಿಗೆ ಕೊನೆಗೆ ತಿಳಿದದ್ದು ಆತ ಗಂಡಸೇ ಅಲ್ಲಾ ಅನ್ನೋ ಸತ್ಯ. 2017 ರ ಮೇ ತಿಂಗಳಲ್ಲಿ ಅಶ್ವಿನ್​ ಸುರೇಶ್ ಯುವತಿಯೋರ್ವಳನ್ನ ಮದುವೆಯಾಗಿದ್ದ. ಅಳಿಯ ಫಾರಿನ್​ನಲ್ಲಿ ಎಂಜಿನಿಯರ್ ಅಂತಾ ಮಧುವಿನ ಕಡೆಯವರು₹ 30 ಲಕ್ಷ ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿ ಅಳಿಯ ಜೊತೆ ಫಾರಿನ್​ಗೆ ಕಳುಹಿಸಿದ್ದರು. ಅಶ್ವಿನ್​ ಸುರೇಶ್ ಜೊತೆ ಖೂಷಿಯಿಂದಲೇ ಯುವತಿ ಅಮೇರಿಕಾಗೆ ತೆರಳಿದ್ದಳು. ಕೆಲ ದಿನಗಳ ನಂತರ ಅಶ್ವಿನ್​ ಸುರೇಶ್​ಗೆ ಇದಕ್ಕೂ ಮೊದಲೇ ಬೇರೆ ಯುವತಿಯೊಂದಿಗೆ ಮದುವೆಯಾಗಿ, ಡಿವೊರ್ಸ್ ಆಗಿರೋದು ಗೊತ್ತಾಗಿದೆ. ಆದ್ರೂ ಪರವಾಗಿಲ್ಲ ಅಂತಾ ಯುವತಿ ಹೊಂದಿಕೊಂಡು ಹೋಗುತ್ತಿದ್ದಳು. ಆದ್ರೆ ರಾತ್ರಿ ವೇಳೆ ಯುವತಿ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು, ಅಶ್ವಿನ್​ ಸುರೇಶ್​ ಒಬ್ಬನೇ ಹೊರಹೋಗುತ್ತಿದ್ದ. ಯುವತಿಯ ಜೊತೆ ಸೆಕ್ಸ್​​​ ಮಾಡಲು ನಿರಾಕರಿಸುತ್ತಿದ್ದ. ಈ ವಿಷಯವಾಗಿ ಯುವತಿ ಪ್ರಶ್ನೆ ಮಾಡಿ ಕೇಳಿದಾಗ ತಾನಗೆ ಮಹಿಳೆಯರ ಬಗ್ಗೆ ಲೈಂಗಿಕ ಆಸಕ್ತಿ ಇಲ್ಲ ಅಂತಾ ಹೇಳಿಬಿಟ್ಟಿದ್ದಾನೆ. ಆಗ ಶಾಕ್​ಗೆ ಒಳಗಾದ ಆಕೆಗೆ, ಆತ ಸಲಿಂಗಕಾಮಿ ಅನ್ನೊದು ಗೊತ್ತಾಗಿದೆ. ಈ ಬಗ್ಗೆ ನನ್ನ ಜೀವನವನ್ನ ಯಾಕೆ ಹಾಳು ಮಾಡಿದೇ ಎಂದು ಕೇಳಿದಾಗ, ನನ್ನ ಮನೆಯ ‌ಕೆಲಸದವಳಾಗಿ ಬಿದ್ದಿರು ಅಂತಾ ಹೇಳಿದ್ದನಂತೆ. ಅಲ್ಲದೇ ಯುವತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದ. ಚಿತ್ರಹಿಂಸೆ ತಾಳಲಾರದೇ ಯುವತಿ ಅಶ್ವಿನ್ ನಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದಾಳೆ. ಇನ್ನು ಈ ಬಗ್ಗೆ ಅಶ್ವಿನ್ ಪೊಷಕರನ್ನ ಕೇಳಿದ್ರೆ, ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಿದ್ದಾರೆ. ತೀವ್ರ ಮನನೊಂದ ಯುವತಿ ಈಗ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv