ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆ ತೀವ್ರ ವಿಚಾರಣೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆಯನ್ನ ಎಸ್​ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಎಸ್‌ಐಟಿ ತನಿಖೆ ವೇಳೆ ಮಹತ್ವದ ಮಾಹಿತಿಗಳು ಲಭಿಸಿವೆ ಅಂತಾ ಹೇಳಲಾಗ್ತಿದೆ.

ಆರೋಪಿ ಸಿಂಧನೂರಿನಲ್ಲಿ ಪಿಯುಸಿ ಮತ್ತು ಪದವಿ ಓದಿದ್ದಾನೆ. ಆರೋಪಿ ಪರುಶುರಾಮ ವಾಗ್ಮೊರೆ ಶ್ರೀರಾಮ ಸೇನೆ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ. 2012 ಜನವರಿಯಲ್ಲಿ ತಹಶೀಲ್ದಾರ್‌ ಕಚೇರಿ ಮುಂಭಾಗ ಪಾಕಿಸ್ತಾನದ ಬಾವುಟವನ್ನು ಹಾರಿಸಿದ್ದ. ಕೋಮುಗಲಭೆ ಸೃಷ್ಟಿಸುವ ಸಂಚು ಹೂಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ. ಬಳಿಕ ಇದೇ ಪ್ರಕರಣದಲ್ಲಿ ಪರಶುರಾಮನನ್ನು ಬಂಧಿಸಿದ್ದ ಪೊಲೀಸರು 6ನೇ ಆರೋಪಿಯನ್ನಾಗಿ ಮಾಡಿದ್ದರು. ಇನ್ನು ಪರಶುರಾಮ ವಾಗ್ಮೋರೆ ತಂದೆ ಅಶೋಕ ಬಾಂಡೆ ವ್ಯಾಪಾರಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv