ಪರಶುರಾಮ್ ಬಡ ಕುಟುಂಬದ ವ್ಯಕ್ತಿ.. ಈ ಕೇಸ್‌ಲ್ಲಿ ಆತನನ್ನ ಬಂಧಿಸಿರೋದು ನಿಜಕ್ಕೂ ಆಶ್ಚರ್ಯ: ಪರಶುರಾಮ್ ಸ್ನೇಹಿತ

ಬೆಂಗಳೂರು: ಹಿಂದೂವಾದಿಗಳನ್ನ ಟಾರ್ಗೆಟ್ ಮಾಡಲಾಗ್ತಿದೆ . ಪರಶುರಾಮ್ ಬಡ ಕುಟುಂಬದ ವ್ಯಕ್ತಿ . ಆತನೇ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಆತನಿಗೆ ಬೆಂಗಳೂರು ಎಲ್ಲಿದೆ ಎಂಬುದೇ ಗೊತ್ತಿಲ್ಲ . ಆತನಿಗೆ ವಯಸ್ಸಾದ ತಾಯಿ ತಂದೆ ಇದ್ದಾರೆ. ಜೊತೆಗೆ ತಮ್ಮ ಇದ್ದಾನೆ. ಈ ಪ್ರಕರಣದಲ್ಲಿ ಆತನನ್ನ ಬಂಧಿಸಿರೋದು ನಿಜಕ್ಕೂ ಆಶ್ಚರ್ಯ ಎಂದು ಫಸ್ಟ್ ನ್ಯೂಸ್‌ಗೆ ಬಂಧಿತ ಪರಶುರಾಮ್ ಸ್ನೇಹಿತ ರಾಕೇಶ್ ಹೇಳಿಕೆ ನೀಡಿದ್ದಾನೆ.

ಆತನನ್ನ ನಾವು ಚಿಕ್ಕ ವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೇವೆ. 10 ನೇ ತಾರೀಖು ಬೆಳಗ್ಗೆ 6:30 ಕ್ಕೆ ಆತನನ್ನ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಪರಶುರಾಮ್ ತಮ್ಮ ಮಾತ್ರ ಇದ್ದ. ಬೆಂಗಳೂರಿನಿಂದ ಯಾರೋ ಪೊಲೀಸರು ಬಂದಿದ್ದರು ಎಂದು ಹೇಳಿದ್ದಾನೆ . ಇದರಿಂದ ನಾವು ಭಯಗೊಂಡು ಸಿಂಧಗಿ ಪೊಲೀಸರಿಗೆ ಕರೆ ಮಾಡಿದ್ವಿ. ಆದರೆ ಅವರು ಬೆಂಗಳೂರು ಪೊಲೀಸರು ಎಂದು ಮಾಹಿತಿ ನೀಡಿದ್ರು . ನಾವು ಏನೋ ಬೇರೆ ವಿಚಾರಣೆಗೆ ಕರೆದುಕೊಂಡು ಹೋಗಿರಬಹುದು ಎಂದು ಸುಮ್ಮನಾದ್ವಿ. ಆದ್ರೆ ಈ ಪ್ರಕರಣದಲ್ಲಿ ಅಂತ ತಿಳಿದಿರಲಿಲ್ಲ . ಸದ್ಯ ಆತನ ಮನೆಗೆ ಬೀಗ ಹಾಕಿದ್ದಾರೆ. ಇದರಿಂದ ಗ್ರಾಮಸ್ಥರೂ ಕೂಡ ಭಯಭೀತರಾಗಿದ್ದಾರೆ. ವಿಚಾರಣೆ ವೇಳೆ ಏನೋ ನಡೆದಿದೆ ಇದೆಲ್ಲಾ ಶುದ್ಧ ಸುಳ್ಳು, ಆತ ಈ ರೀತಿ ಮಾಡಿರೋಕೆ ಸಾಧ್ಯವೇ ಇಲ್ಲ ಎಂದು ಎಸ್ ಐಟಿ ಅಧಿಕಾರಿಗಳು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿ ಪರುಶುರಾಮ್ ಸ್ನೇಹಿತ ರಾಕೇಶ್ ಹೇಳಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv