ಡಿಕೆಎಸ್​​ ಮನೆಗೆ ಪರಮೇಶ್ವರ್​ ದಿಢೀರ್​ ಭೇಟಿ: ರಮೇಶ್​ ಜಾರಕಿಹೊಳಿ ನಡೆ ಬಗ್ಗೆ ಚರ್ಚೆ

ಬೆಂಗಳೂರು: ಅತೃಪ್ತ ಕೈ ಶಾಸಕರನ್ನ ಒಂದೆಡೆ ಸೇರಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಾದ ಬೆನ್ನಲ್ಲೆ ಕಾಂಗ್ರೆಸ್​ ಮುಖಂಡರು ದಿಢೀರ್ ಭೇಟಿಯಾಗಿದ್ದಾರೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಸದಾಶಿವನಗರದಲ್ಲಿರುವ ಸಚಿವ ಡಿ.ಕೆ ಶಿವಕುಮಾರ್ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ರಮೇಶ್​​ ಜಾರಕಿಹೊಳಿ ನಡೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಬಹುದಾದ ಬಿಕ್ಕಟ್ಟಿನ ಬಗ್ಗೆ ಇಬ್ಬರೂ ಬಿರುಸಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ತಮ್ಮೊಂದಿಗೆ ಇನ್ನೂ ಕೆಲವು ಅತೃಪ್ತ ಕಾಂಗ್ರೆಸ್​​ ಶಾಸಕರನ್ನು ಕರೆದೊಯ್ಯಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆ ಡಿಕೆ ಶಿವಕುಮಾರ್​ ಹಾಗೂ ಪರಮೇಶ್ವರ್​ ಚರ್ಚೆ ನಡೆಸಿದ್ದಾರೆ. ಬೇರೆ ಯಾವ ಶಾಸಕರು ರಾಜೀನಾಮೆ ನೀಡಬಹುದು..? ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ  ಹಾಗೂ ನಾಗೇಂದ್ರ  ರಾಜೀನಾಮೆ ಕೊಡಬಹುದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆ ಪರಮೇಶ್ವರ್​ ಹಾಗೂ ಶಿವಕುಮಾರ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv