ಶ್ರೀಲಂಕಾ ಬಾಂಬ್ ಸ್ಫೋಟ, ಮೃತ ರಮೇಶ್‌ಗೌಡ ನಿವಾಸಕ್ಕೆ ಪರಮೇಶ್ವರ್ ಭೇಟಿ

ತುಮಕೂರು: ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ರಮೇಶ್‌ಗೌಡರ ನಿವಾಸಕ್ಕೆ ಡಿಸಿಎಂ ಪರಮೇಶ್ವರ್​ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ನಡೆದ ಹೀನಕೃತ್ಯವನ್ನ ಖಂಡಿಸುತ್ತೇನೆ. ಸುಮಾರು 300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಪ್ರಾರ್ಥನೆ ಮಾಡ್ತೇನೆ. ಘಟನೆಯಲ್ಲಿ ಗಾಯಗೊಂಡ 500ಕ್ಕೂ ಹೆಚ್ಚು ಜನ ಶೀಘ್ರವಾಗಿ ಗುಣಮುಖರಾಗಲಿ. ರಮೇಶ್‌ಗೌಡ ತೀರಿಕೊಂಡಿದ್ದು ನಮಗೆಲ್ಲಾ ಬಹಳಷ್ಟು ನೋವುಂಟು ಮಾಡಿದೆ. ಅದಷ್ಟು ಶೀಘ್ರವಾಗಿ ಅವರ ಪಾರ್ಥಿವ ಶರೀರ ತುಮಕೂರಿಗೆ ತರೋದಕ್ಕೆ ನಾವೆಲ್ಲ ಪ್ರಯತ್ನ ಮಾಡ್ತಾ ಇದ್ದೇವೆ. ಎಷ್ಟು ಭಾರತೀಯರು ತೀರಿಕೊಂಡಿದ್ದಾರೆ. ಅವರ ಮೃತದೇಹವನ್ನ ಶೀಘ್ರವಾಗಿ ತರೋ ಪ್ರಯತ್ನ ಮಾಡ್ತಾ ಇದ್ದಾರೆ.  ಹಲವಾರು ಚರ್ಚ್​, ಹೊಟೆಲ್ ಹಾಗೂ ಇತರೆ ಕಡೆಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇನ್ನೂ ನಮಗೆ ನಿಖರವಾದ ಮಾಹಿತಿ ಸಿಗ್ತಾ ಇಲ್ಲ. ಆದ್ರೆ ಸಾವನ್ನಪ್ಪಿದ ಕರ್ನಾಟಕದವರು ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv