ಧಾರವಾಡದಲ್ಲಿ ಪ್ಯಾರಾಗ್ಲೈಡಿಂಗ್ ಮೂಲಕ ಮತದಾರರಿಗೆ ಜಾಗೃತಿ

ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯು ಬೆಂಗಳೂರು ಏವಿಯೇಷನ್ ಮತ್ತು ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಇಂದು ಮತದಾರರ ಜಾಗೃತಿಗಾಗಿ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಿತು. ಕರ್ನಾಟಕ ಕಾಲೇಜು ಮೈದಾನದಿಂದ ಬಾನಂಗಳಕ್ಕೆ ಹಾರಿ ಪ್ಯಾರಾಗ್ಲೈಡಿಂಗ್ ಮೂಲಕ, ನಗರ ಹಾಗೂ ಸುತ್ತಮುತ್ತಲಿನ ಸ್ಥಳಗಳ ಮೇಲೆ ಸಂಚರಿಸಿ ಮತದಾರರ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಈ ವೇಳೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ಯಾರಾಗ್ಲೈಡಿಂಗ್ ಮಾಡುವುದರ ಮೂಲಕ ಆಗಸದಿಂದ ಮತದಾರರಿಗೆ ಸಂದೇಶ ಹರಡಿದರು. ಪೈಲಟ್ ಸಿದ್ದಾರ್ಥ ಸಿಇಒಗೆ ಸಾಥ್ ನೀಡಿದರು. ಪ್ಯಾರಾಗ್ಲೈಡಿಂಗ್ ನೋಡಿ ವಾಯುವಿಹಾರಿಗಳು ಖುಷಿ ಪಟ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv