ಮನೆಯಂಗಳಕ್ಕೆ ಬಂದ ಅಪರೂಪದ ಅತಿಥಿ..!

ಅಂಕೋಲಾ: ತಾಲೂಕಿನ ಅವರ್ಸಾದಲ್ಲಿ ಅಪರೂಪದ ಪೆಂಗೋಲಿನ್ ಪ್ರಾಣಿ ಪತ್ತೆಯಾಗಿದ್ದು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಅವರ್ಸಾದ ಗಾಳು ಆಗೇರ ಎನ್ನುವವರ ಮನೆಯಲ್ಲಿ ಪೆಂಗೋಲಿನ್ ದಿಢೀರ್​ನೆ ಪ್ರತ್ಯಕ್ಷವಾಗಿದ್ದು, ಅದನ್ನು ಕಂಡ ಮನೆಯವರು ಭಯ ಭೀತಗೊಂಡಿದ್ದರು. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿಎಫ್ಒ ಗಣಪತಿ ನಾಯ್ಕ ಪರಿಶೀಲನೆ ನಡೆಸಿ, ಪೆಂಗೋಲಿನ್​ ಪ್ರಾಣಿಯನ್ನು ತಮ್ಮ ಸುಪರ್ದಿಗೆ ಪಡೆದು ರಕ್ಷಣೆ ಮಾಡಿದ್ದಾರೆ. ಅಂಕೋಲಾದ ಗುಳೆ ಅರಣ್ಯ ಪ್ರದೇಶದಲ್ಲಿ ಈ ಪ್ರಾಣಿಯನ್ನು ಬಿಡಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv