ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಪ್ರತಿಭಟನೆ

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಸದಸ್ಯರು ಕಲಬುರ್ಗಿ ತಾಲೂಕು ಪಂಚಾಯತಿ‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರದ ಆದೇಶದಂತೆ 55,114 ನೌಕರರಿಗೆ ಇಎಫ್ಎಂಎಸ್ ಮೂಲಕ ವೇತನ ನೀಡುವಂತೆ ಕ್ರಮ ಕೈಗೊಳ್ಳಬೇಕು ಮತ್ತು‌ ಎಸ್ ಎಸ್ ಎಲ್‌ಸಿ‌ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್​ಗಳಿಗೆ ಸಿಗುತ್ತಿದ್ದ ಗ್ರೇಡ್ 2 ಕಾರ್ಯದರ್ಶಿ ಬಡ್ತಿ ಪುನಃ ಸಿಗುವಂತೆ ಆದೇಶ ಹೊರಡಿಸಬೇಕೆಂದು‌ ಒತ್ತಾಯಿಸಿದರು. ಗ್ರಾಮ ಪಂಚಾಯತ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಹರಸೂರ ಸೇರಿದಂತೆ ಹಲವರು‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv