ಒಂದಾನೊಂದು ಕಾಲದಲ್ಲಿ ಭೂಮಿ ಮೇಲೂ ನಡೆದಾಡುತ್ತಿದ್ದವು ತಿಮಿಂಗಿಲಗಳು..!

ವೇಲ್ ಅಥವಾ ತಿಮಿಂಗಿಲಗಳು ಜಲಚರಗಳು ಅನ್ನೋದು ನಮಗೆ ಗೊತ್ತಿರುವ ವಿಚಾರವೇ. ಆದ್ರೆ, ಇದೇ ತಿಮಿಂಗಿಲಗಳು ಒಂದಾನೊಂದು ಕಾಲದಲ್ಲಿ ಭೂಮಿ ಮೇಲೂ ವಾಸವಾಗಿದ್ದವು. ಅವುಗಳಿಗೂ ಭೂಮಿ ಮೇಲೆ ನಡೆಯುವ ಶಕ್ತಿ ಇತ್ತು ಅನ್ನೋದು ನಿಮಗೆ ಗೊತ್ತಾ?

ಇಂಥದ್ದೊಂದು ಸತ್ಯವನ್ನ ಇದೀಗ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಇದು ನೂರೋ, ಸಾವಿರ ವರ್ಷಗಳ ಹಿಂದಿನ ಮಾತಲ್ಲ. ಬರೊಬ್ಬರಿ 43 ಮಿಲಿಯನ್ ವರ್ಷಗಳ ಹಿಂದೆ ಅಂದ್ರೆ 4 ಕೋಟಿ 30 ಲಕ್ಷ ವರ್ಷಗಳ ಹಿಂದೆ ಭೂಮಿ ಹಾಗೂ ನೀರು ಎರಡರಲ್ಲೂ ಜೀವಿಸಬಲ್ಲ ಶಕ್ತಿಯಿದ್ದ ವೇಲ್​ಗಳು ಇದ್ದವಂತೆ. ವೇಲ್​ಗಳು ಸಂಪೂರ್ಣವಾಗಿ ಜಲಚರಗಳಾಗುವ ಮೊದಲು ಭೂಮಿಯ ಮೇಲೂ ವಾಸವಿದ್ದವು. ಅವುಗಳಿಗೆ ನಾಲ್ಕು ಕಾಲುಗಳಿದ್ದು, ಅದರಿಂದ ನಡೆಯುವುದಕ್ಕೂ ಸಾಧ್ಯವಿತ್ತು ಅಂತ ರಾಯಲ್ ಬೆಲ್ಜಿಯನ್ ಇನ್​ಸ್ಟಿಟ್ಯೂಟ್ ಆಫ್ ನ್ಯಾಚುರಲ್ ಸೈನ್ಸಸ್​ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಪೆರೆಗೊಸಿಟಸ್ ಪ್ಯಾಸಿಫಿಕಸ್ ಜಾತಿಯ ಈ ವೇಲ್​ಗಳು ಸುಮಾರು 4 ಮೀಟರ್ (13 ಅಡಿ) ಉದ್ದವಿದ್ದವು. ಇವುಗಳಿಗೆ ನಾಲ್ಕು ಕಾಲುಗಳು ಇದ್ದಿದ್ದರಿಂದ ಭೂಮಿ ಮೇಲೆ ನಡೆಯುವುದಕ್ಕೆ ಸಾಧ್ಯವಾಗುತ್ತಿತ್ತು. ಅಲ್ಲದೆ, ಸಮುದ್ರದಲ್ಲೂ ಕೂಡ ವಾಸಿಸುವ ಶಕ್ತಿ ಇತ್ತು. ಮರಿಗಳಿಗೆ ಜನ್ಮ ನೀಡುವ ಸಮಯದಲ್ಲಿ ಭೂಮಿಗೆ ಬಂದು, ಗುಡ್ಡ ಗಾಡುಗಳಲ್ಲಿ ಅಡಗಿ ಕುಳಿತು ಜನ್ಮ ನೀಡುತ್ತಿದ್ದವು ಅಂತ ವಿಜ್ಞಾನಿಗಳು ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv