ಭಾರತ ಪಾಕ್ ನಡುವೆ ಶಾಂತಿ ಕೋರುವ ಱಪ್​ ಸಾಂಗ್, ವಿಡಿಯೋ ವೈರಲ್

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಇತ್ತೀಚೆಗೆ ಬಿಗಡಾಯಿಸಿರೋದು ಗೊತ್ತೇ ಇದೆ. ಇದರ ಮಧ್ಯೆ ಎರಡೂ ದೇಶಗಳ ನಡುವೆ ಶಾಂತಿ ನೆಲೆಸಬೇಕು ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕ್ ನಟಿ ಹಾಗೂ ಕಾಮಿಡಿಯನ್ ಬುಶ್ರಾ ಅನ್ಸಾರಿ ಈ ವಿಡಿಯೋ ತಯಾರಿಸಿದ್ದಾರೆ. ಪಾಕಿಸ್ತಾನದ ಇಬ್ಬರು ಹಿರಿಯ ನಟಿಯರಾದ ನೀಲಂ ಬಶೀರ್​ ಹಾಗೂ ಆಸ್ಮಾ ಅಬ್ಬಾಸ್ ಭಾರತ ಹಾಗೂ ಪಾಕಿಸ್ತಾನದ ಇಬ್ಬರು ನೆರೆಮನೆಯ ಮಹಿಳೆಯರಾಗಿ ಕಾಣಿಸಿಕೊಂಡಿದ್ದಾರೆ. ಈ ಪಂಜಾಬಿ ಱಪ್ ವಿಡಿಯೋಗೆ ಹಮ್​ಸಾಯೇ ಮಾ ಜಾಯೇ(ಒಂದೇ ಮಣ್ಣಿನ ಮಕ್ಕಳು) ಅಂತ ಹೆಸರಿಡಲಾಗಿದೆ.

ಎರಡೂ ದೇಶಗಳು ಯುದ್ಧ ಮಾಡೋಕೆ ಮುಂದಾಗಿರೋದು ಯಾಕೆ ಅಂತ ಮಹಿಳೆಯರು ಈ ವಿಡಿಯೋದಲ್ಲಿ ಪ್ರಶ್ನಿಸುತ್ತಾರೆ. ಇದೆಲ್ಲಾ  ರಾಜಕಾರಣಿಗಳ ಗೇಮ್​​ ಬಿಡು, ನಾವು ಬೇರೆ ಏನಾದ್ರೂ ಮಾತಾಡೋಣ. ನಿಮ್ಮ ಮನೆ ಹೇಗಿರಬಹುದು ಅಂತ ನಾನು ಯಾವಾಗ್ಲೂ ಅಂದ್ಕೋತೀನಿ. ನಾವಿಬ್ಬರೂ ಒಂದೇ ನೆಲದಲ್ಲಿ ಇದ್ದೀವಿ. ಒಂದೇ ಆಕಾಶ, ಒಂದೇ ಚಂದ್ರನನ್ನು ನೋಡ್ತೀವಿ ಅಂತ ಹೇಳ್ತಾರೆ. ಟಿವಿಯಲ್ಲಿ ನೋಡ್ದೆ ನೀವು ನಮ್ಮ ಶತ್ರುಗಳಂತೆ, ನಿಮ್ಮ ಬಳಿ ಆಟಂ ಬಾಂಬ್ ಇದ್ಯಂತೆ. ಈ ಗೋಡೆ ದಾಟಿ ಬರಬೇಕು, ಆದ್ರೆ ಅದರ ಮೇಲೆ ಗಾಜಿನ ತುಂಡುಗಳಿವೆ. ಆ ಗಾಜನ್ನ ಯಾರಾದ್ರೂ ತೆಗೆಯ ಬನ್ನಿ ಅಂತ ಅಕ್ಕಪಕ್ಕದ ಮನೆಯ ಮಹಿಳೆಯರು ಮಾತಾಡಿಕೊಳ್ಳುವ ರೀತಿ ವಿಡಿಯೋವನ್ನ ಚಿತ್ರೀಕರಿಸಲಾಗಿದೆ.

ಈ ವಿಡಿಯೋ ಈಗಾಗಲೇ ಪಾಕಿಸ್ತಾನದಲ್ಲಿ ವೈರಲ್ ಆಗಿದ್ದು, ಈಗ ಭಾರತದಲ್ಲೂ ಜನರ ಮನಸ್ಸು ಗೆಲ್ಲುತ್ತಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv