ಹಸುವನ್ನ ಕೂರಿಸಿಕೊಂಡು ಬೈಕ್​​ ರೈಡ್​ ಮಾಡಿದ ಪಾಕ್ ವ್ಯಕ್ತಿ

ಬೈಕ್​​ ಮೇಲೆ ನಾಯಿ ಅಥವಾ ಬೆಕ್ಕುಗಳನ್ನ ಕೂರಿಸಿಕೊಂಡು ಹೋಗೋದನ್ನ ನೋಡಿರ್ತಿರ. ಹಸು ಅಥವಾ ಎಮ್ಮೆಯನ್ನ ಕೊಂಡೊಯ್ಯಬೇಕಾದ್ರೆ ಟ್ರಕ್ ಅಥವಾ ಟೆಂಪೋ ಬಳಸುತ್ತಾರೆ. ಆದ್ರೆ ಇಲ್ನೋಡಿ, ಪಾಕಿಸ್ತಾನದ ಈ ವ್ಯಕ್ತಿ ಬೈಕ್​ನಲ್ಲೇ ಹಸುವನ್ನ ಕೂರಿಸಿಕೊಂಡು ಡ್ರೈವ್​ ಮಾಡಿದ್ದಾನೆ. ಅದೇ ರಸ್ತೆಯಲ್ಲಿ ಹೋಗ್ತಿದ್ದ ಇತರೆ ವಾಹನ ಸವಾರರು ಇದನ್ನ ಮೊಬೈಲ್​​​ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ರೆಕಾರ್ಡ್​ ಮಾಡಿದ ವ್ಯಕ್ತಿಗಳಲ್ಲೊಬ್ಬರು, ‘ಕಮಾಲ್.., ಇದು ಪಾಕಿಸ್ತಾನಿ ಜುಗಾಡ್​​’ ಎಂದು ಕೂಗೋದನ್ನ ಕೇಳಬಹುದು. ಇನ್ನು ಬೈಕ್​ ಮೇಲೆ ಕುಳಿತಿದ್ದ ಹಸು ಕೂಲ್​ ಆಗಿಯೇ ಇತ್ತು. ಅತ್ತಿತ್ತ ಅಲುಗಾಡದೇ ಆರಾಮವಾಗಿ ಕುಳಿತಂತೆ ಕಾಣ್ತಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ವಿಡಿಯೋ ಹಾಸ್ಯಾಸ್ಪದವಾಗಿದೆ ಅಂದ್ರೆ, ಇನ್ನೂ ಕೆಲವರು ಇದು ಪ್ರಾಣಿ ಹಿಂಸೆ ಅಂತ ಕರೆದಿದ್ದಾರೆ. ರಸ್ತೆ ಸಂಚಾರ ನಿಮಯ ಹಾಗೂ ಪ್ರಾಣಿ ಸಂರಕ್ಷಣಾ ನಿಯಮ ಎರಡಕ್ಕೂ ಇದು ವಿರುದ್ಧ ಎಂದು ಕಮೆಂಟ್​ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv