ಮೋದಿ ‘ಅಭಿನಂದನೆ’ ಎಂದಿದ್ದನ್ನ, IAF​ ಹೀರೋ ಅಭಿನಂದನ್ ಅಂದ್ಕೊಂಡು ಟ್ರೋಲ್​ ಆದ ಪಾಕ್ ಮೀಡಿಯಾ

ಐಎಎಫ್​​ ವಿಂಗ್​ ಕಮಾಂಡರ್​ ಅಭಿನಂದನ್​​ ಭಾರತದ ಹೀರೋ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಹಾಗೇ ಭಾರತ ಎಂದಿಗೂ ಈ ಹೀರೋನ ಮರೆಯೋದಿಲ್ಲ ಅನ್ನೋದು ಕೂಡ ಸತ್ಯ. ನಾವಷ್ಟೇ ಅಲ್ಲ ಪಾಕಿಸ್ತಾನ ಕೂಡ ಅಭಿನಂದನ್​​ರ ಖಡಕ್ ಮಾತು ಹಾಗೂ ಅವರ ದಿಟ್ಟ ವ್ಯಕ್ತಿತ್ವವನ್ನ ಮರೆಯೋಕಾಗಲ್ಲ. ಎಫ್​​16 ಯುದ್ಧವಿಮಾನವನ್ನೇ ಹೊಡೆದುರುಳಿಸಿ ಪಾಕಿಸ್ತಾನ ಕನಸಲ್ಲೂ ಬೆಚ್ಚಿ ಬೀಳುವಂತೆ ಮಾಡಿದ್ದರು ಅಭಿನಂದನ್. ಅದೇ ಕಾರಣಕ್ಕೆ ಈಗ ಪಾಕಿಸ್ತಾನದ ಆ್ಯಂಕರ್​ಗಳಿಗೆ ಹಗ್ಗ ನೋಡಿದ್ರೂ ಹಾವಿನಂತೆ ಕಾಣುತ್ತಿದೆ.

ಲೋಕಸಭಾ ಚುನಾವಣೆ ಗೆಲುವಿನ ಬೆನ್ನಲ್ಲೇ ಮೋದಿ ಕಳೆದ ಶನಿವಾರ ಸೆಂಟ್ರಲ್​ ಹಾಲ್​​ನಲ್ಲಿ ನೂತನ ಎನ್​ಡಿಎ ಸಂಸದರನ್ನ ಉದ್ದೇಶಿಸಿ ಮಾತನಾಡಿದ್ರು. ತಮ್ಮ ಭಾಷಣದಲ್ಲಿ ಬಿಜಿಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ‘ಕೋಟಿ ಕೋಟಿ ಅಭಿನಂದನೆ​​’ ಎಂದು ಹೇಳಿದ್ರು. ಹಿಂದಿಯಲ್ಲಿ ಅಭಿನಂದನ್ ಎಂದು ಹೇಳಿದ್ದನ್ನ ಪಾಕಿಸ್ತಾನದ ಮಾಧ್ಯಮವೊಂದು ಐಎಎಫ್​​ ಹೀರೋ ಅಭಿನಂದನ್ ಬಗ್ಗೆ ಮೋದಿ ಹೇಳ್ತಿದ್ದಾರೆ ಎಂದು ವರದಿ ಮಾಡಿ, ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ.

“ಎಲೆಕ್ಷನ್ ಗೆದ್ದ​ ಬಳಿಕವೂ ಮೋದಿ, ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್​ರನ್ನ ಮರೆತಿಲ್ಲ. ಅಭಿನಂದನ್​​ರನ್ನ ಹೀರೋನಂತೆ ಬಿಂಬಿಸ್ತಿದ್ದಾರೆ” ಅಂತ ಪಾಕಿಸ್ತಾನದ ಆ್ಯಂಕರ್​ ಹೇಳಿದ್ದಾರೆ. ಹಿಂದಿಯಲ್ಲಿ ಅಭಿನಂದನ್​ ಎಂದರೆ congrajulations ಅಥವಾ ಶುಭಹಾರೈಕೆ ಎಂಬ ಅರ್ಥ, ಅಭಿನಂದನ್​ ಎಂದಾಗಲೆಲ್ಲಾ ಅದು ಐಎಫ್​​ ವಿಂಗ್ ಕಮಾಂಡರ್​ ಅಭಿನಂದನ್​ ಬಗ್ಗೆ ಅಲ್ಲ ಅಂತ ಜನ ಈಗ ಪಾಕ್​ ಆ್ಯಂಕರ್​ನನ್ನ ಟ್ರೋಲ್ ಮಾಡ್ತಿದ್ದಾರೆ. ಇನ್ನು ಇದೇ ಭಾಷಣದಲ್ಲಿ ಮೋದಿ ಆಶಾ, ಆಕಾಂಕ್ಷಾ ಎಂಬ ಪದಗಳನ್ನೂ ಬಳಸಿದ್ದು, ಹಾಗಾದ್ರೆ ಅವರು ಯಾರು ಅಂತ ಜನ ಪಾಕ್​ ಮೀಡಿಯಾದ ಕಾಲೆಳೆದಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv