ಫೆ.19ರಂದು ಐಸಿಜೆಗೆ ಜಾಧವ್​ ವಿರುದ್ಧ ಪಾಕ್ ಸಾಕ್ಷ್ಯಾಧಾರ!

ಇಸ್ಲಾಮಾಬಾದ್​: ಕುಲಭೂಷಣ್​ ಜಾಧವ್ ಪಾಕಿಸ್ತಾನದಲ್ಲಿ  ಗೂಢಚಾರಿಕೆ ಆರೋಪದಲ್ಲಿ ಬಂಧನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ​ ಎಲ್ಲಾ ಸಾಕ್ಷ್ಯಾಧಾರಗಳನ್ನು ಅಂತಾರಾಷ್ಟ್ರೀಯ ಕೋರ್ಟ್​​ಗೆ ಸಲ್ಲಿಸಲಿದ್ದೇವೆ ಅಂತಾ ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಷಿ ಹೇಳಿದ್ದಾರೆ. ಜಾಧವ್​ ವಿಧ್ವಂಸಕ ಚಟುವಟಿಕೆಗಳನ್ನ ನಡೆಸುತ್ತಿದ್ದಕ್ಕೆ ನಮ್ಮ ಬಳಿ ಎಲ್ಲಾ ಸಾಕ್ಷ್ಯಾಧಾರಗಳಿವೆ. ಅದನ್ನು ಫೆಬ್ರವರಿ 19ರಂದು ನಾವು ಐಸಿಜೆ(ಇಂಟರ್​ನ್ಯಾಷನಲ್​ ಕೋರ್ಟ್​ ಆಫ್​ ಜಸ್ಟಿಸ್​) ಗೆ ಸಲ್ಲಿಸಲಿದ್ದೇವೆ ಅಂತ ಹೇಳಿದ್ದಾರೆ.

ಪಾಕ್​ನಲ್ಲಿ ಬೇಹುಗಾರಿಕೆ ನಡೆಸಿದ್ದಾರೆ ಅನ್ನೋ ಆರೋಪದ ಮೇಲೆ ಜಾಧವ್​ಗೆ ಪಾಕಿಸ್ತಾನ್ ಮಿಲಿಟರಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಪಾಕ್ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಭಾರತ ಐಸಿಜೆ ಮೊರೆ ಹೋಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಐಸಿಜೆ, ಜಾಧವ್​ಗೆ ನೀಡಿರುವ ಶಿಕ್ಷೆಗೆ ತಡೆ ನೀಡಿದೆ. ಕೋರ್ಟ್​ ಅಂತಿಮ ತೀರ್ಪು ನೀಡುವವರೆಗೆ ಶಿಕ್ಷೆ ಜಾರಿ ಮಾಡದಂತೆ ಪಾಕಿಸ್ತಾನಕ್ಕೆ ನಿರ್ದೇಶಿಸಿದೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv