‘ದ್ವಿಪಕ್ಷೀಯ ಸರಣಿ ಆಡಲು ಭಾರತವೇ ನಮ್ಮನ್ನ ಕೇಳುತ್ತೆ’-ಪಿಸಿಬಿ

ಲಾಹೋರ್​: ನಾವು ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದರೆ, ಆಗ ಭಾರತವೇ ನಮ್ಮ ಜೊತೆ ಸರಣಿ ಆಡೋಕೆ ಮುಂದೆ ಬರುತ್ತೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಸರಣಿ ಆಯೋಜಿಸಿ ಅಂತ ಕೇಳಿಕೊಳ್ಳುತ್ತೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೇಳಿದೆ.
ಪಾಕಿಸ್ತಾನ ಗಡಿಯಲ್ಲಿ ಕ್ಯಾತೆ ಶುರು ಮಾಡಿದ್ದು ಹಾಗೂ ಉಗ್ರರ ಉಪಟಳ ಹೆಚ್ಚಾದಾಗಿನಿಂದ ಭಾರತ ಎಲ್ಲಾ ರೀತಿಯ ಸಂಬಂಧಗಳನ್ನ ಕಡಿದುಕೊಂಡಿದೆ. ಹೀಗಾಗಿ 2007ರಿಂದ ಇಲ್ಲಿವರೆಗೂ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ವರ್ಲ್ಡಕಪ್​ನಂಥ ಟೂರ್ನಮೆಂಟ್​ಗಳಲ್ಲಿ ಭಾರತ ಮತ್ತು ಪಾಕ್ ಎದುರಾಗಿದ್ದು ಬಿಟ್ಟರೆ, ಬೇರೆಲ್ಲೂ ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ನಡೆದಿಲ್ಲ. ಈ ಹಿಂದೆ ಪಾಕ್ ಹಲವು ಬಾರಿ ಕೇಳಿದ್ರೂ ಭಾರತ ಕ್ರಿಕೆಟ್ ಪಂದ್ಯಾವಳಿ ನಡೆಸಲು ಮುಂದಾಗಿಲ್ಲ. ಹೀಗಾಗಿ ಈಗ ಪಾಕಿಸ್ತಾನ ನಾವೇ ದೊಡ್ಡ ಟೀಮ್ ಆಗಿ ಹೊರಹೊಮ್ಮಿದ್ರೆ, ಆಗ ಭಾರತವೇ ನಮ್ಮ ಜೊತೆ ಸರಣಿ ಆಡೋಕೆ ಮುಂದೆ ಬರುತ್ತೆ ಅಂತ ಹೇಳಿದೆ.
ಈ ಬಗ್ಗೆ ಲಾಹೋರ್​ನಲ್ಲಿ ಪ್ರತಿಕ್ರಿಯಿಸಿರುವ ಪಿಸಿಬಿಯ ನೂತನ ಎಂಡಿ ವಸೀಮ್ ಖಾನ್, ನಾವು ಅತ್ಯುತ್ತಮ ಟೀಮ್ ಆದ್ರೆ, ಆಗ ಭಾರತವೇ ನಮ್ಮ ಜೊತೆ ಕ್ರಿಕೆಟ್ ಸರಣಿ ಆಯೋಜಿಸಲು ಕೇಳುವ ಸನ್ನಿವೇಶ ಬರಬಹುದು ಅಂತ ಹೇಳಿದ್ದಾರೆ. ಕಳೆದ ಆಗಸ್ಟ್​ನಲ್ಲಿ ಪಿಸಿಬಿ ಚೇರ್​ಮನ್ ಆಗಿ ಅಧಿಕಾರ ಸ್ವೀಕರಿಸಿದ್ದ ಎಹಸಾನ್ ಮನಿ, ಪಾಕಿಸ್ತಾನ ನಮ್ಮ ಜೊತೆ ಕ್ರಿಕೆಟ್ ಆಡಿ ಅಂತ ಭಾರಕ್ಕೆ ಬೇಡುವುದಿಲ್ಲ ಅಂತ ಹೇಳಿದ್ದರು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv