ಪಾಕ್ ರಿಪೋರ್ಟರ್​ನ ಈ ವಿಡಿಯೋ ಫುಲ್ ವೈರಲ್..!

ನವದೆಹಲಿ: ಪಾಕಿಸ್ತಾನಿ ರಿಪೋರ್ಟರ್ ಒಬ್ಬ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್ಸಾಗಿದ್ದಾರೆ. ಪಾಕಿಸ್ತಾನದ ಹಲವೆಡೆ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಲಾಹೋರ್​ನಲ್ಲಿ ವರದಿ ಮಾಡುತ್ತಿದ್ದ ವರದಿಗಾರನೊಬ್ಬ, ಸ್ಥಳೀಯ ಆಡಳಿತದ ಗಮನ ಸೆಳೆಯಲು ವಿಶಿಷ್ಟ ರೀತಿಯಲ್ಲಿ ಕರ್ತವ್ಯ ಪ್ರಜ್ಞೆ ಮೆರೆದಿದ್ದ.
ಮಕ್ಕಳು ಈಜಾಡಲು ಬಳಸುವ ಟ್ಯೂಬ್​ಗಳಲ್ಲಿ ಕುಳಿತುಕೊಂಡು ಆತ ರಿಪೋರ್ಟ್ ಮಾಡಿದ್ದಾರೆ. ನಿಮಗೆ ನಾನು ಸ್ವಿಮ್ಮಿಂಗ್ ಪೂಲ್​ನಲ್ಲಿ ಕೂತಿದ್ದೇನೆ ಅಂತ ಅನಿಸಬಹುದು ಅಂತಲೇ ತನ್ನ ವರದಿಗಾರಿಕೆಯನ್ನ ಆರಂಭಿಸಿದ್ದ. ಮೊದಲಿಗೆ ಕ್ಲೋಸಪ್​ನಲ್ಲಿ ರಿಪೋರ್ಟರ್​ನನ್ನ ತೋರಿಸುವ ಕ್ಯಾಮೆರಾಮೆನ್ ನಂತರ ಇಡೀ ಪ್ರದೇಶದ ದೃಶ್ಯಗಳನ್ನ ಸೆರೆ ಹಿಡಿದಿದ್ದಾರೆ. ಆಗ ಇದು ರಸ್ತೆಯ ಮಧ್ಯೆ ಮಳೆಯಿಂದಾಗಿ ನೀರು ನಿಂತಿರುವ ದೃಶ್ಯ ಅನ್ನೋದು ಗೊತ್ತಾಗುತ್ತೆ. ಮನುಷ್ಯನ ದೇಹ ಅರ್ಧ ಮುಚ್ಚಿಹೋಗುವಷ್ಟು ನೀರು ರಸ್ತೆಯಲ್ಲಿ ನಿಂತಿದ್ದರೂ ಸ್ಥಳೀಯ ಆಡಳಿತ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಅಂತ ವರದಿಗಾರ ಮನಮುಟ್ಟುವ ಹಾಗೆ ವರದಿಗಾರಿಕೆ ಮಾಡಿದ್ದಾರೆ.
ಸಮಸ್ಯೆಯನ್ನ ವಿವರಿಸುತ್ತಲೇ, ಎಲ್ಲದರಲ್ಲೂ ಎಂಜಾಯ್ ಮಾಡುವ ಕಲೆಯನ್ನ ಜನರೂ ಕಲಿತುಕೊಳ್ಳಬೇಕು ಅಂತ ಹೇಳಿ, ಆಡಳಿತಕ್ಕೆ ಟಾಂಗ್ ನೀಡಿದ್ದಾರೆ. ಅವರ ಕಾರ್ಯ ವೈಖರಿಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನೋಡುಗರಿಂದ ವರದಿಗಾರನ ಕೆಲಸ, ಡೆಡಿಕೇಷನ್​​ಗೆ ಮೆಚ್ಚುಗೆ ಕೂಡ ವ್ಯಕ್ತವಾಗ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv