₹6 ಸಾವಿರಕ್ಕೆ ಖರೀದಿಸಿದ್ದ ಪೇಂಟಿಂಗ್​ ₹24 ಲಕ್ಷಕ್ಕೆ ಮಾರಾಟ ಮಾಡ್ದ..!

ಏನಾದ್ರೂ ವಸ್ತುವನ್ನ ಮಾರಾಟ ಮಾಡಿದಾಗ ಕರ್ಚು ಮಾಡಿದ್ದಕ್ಕಿಂತ ಡಬಲ್​ ಲಾಭ ಬಂದ್ರೆ ಯಾರಿಗೆ ತಾನೆ ಖುಷಿಯಾಗಲ್ಲ. ಜರ್ಮನಿಯ ವ್ಯಕ್ತಿಯೊಬ್ಬ ತಾನು ಖರ್ಚು ಮಾಡಿದ್ದಕ್ಕಿಂತ ನಾನೂರು ಪಟ್ಟು ಹೆಚ್ಚಿನ ಮೊತ್ತಕ್ಕೆ ಪೇಟಿಂಗ್​​ವೊಂದನ್ನ ಮಾರಾಟ ಮಾಡಿ ಗರಿ ಗರಿ ನೋಟುಗಳನ್ನ ಎಣಿಸಿಕೊಂಡಿದ್ದಾನೆ. ಹೌದು, ಹೆಂಕ್​​​ ಲಾರ್ಮನ್ಸ್​ ಎಂಬಾತ ಥ್ರಿಫ್ಟ್​​ ಸ್ಟೋರ್​​ನಿಂದ 75 ಯೂರೋ(ಅಂದಾಜು ₹6 ಸಾವಿರ) ಕೊಟ್ಟು ಪೇಂಟಿಂಗ್​ವೊಂದನ್ನ ಖರೀದಿಸಿದ್ದ. ಬಳಿಕ ಅದನ್ನ ಎಕ್ಸ್​​ಪರ್ಟ್​​ವೊಬ್ಬರ ಬಳಿ ತೆಗೆದುಕೊಂಡು ಹೋಗಿದ್ದ. ಆಗ ಅದು​​ ತುಂಬಾ ಬೆಲೆ ಬಾಳುವ ಪೇಂಟಿಂಗ್ ಅಂತ ಗೊತ್ತಾಗಿದೆ. ಡಚ್​​ ಕಲಾವಿದ ಜೋಹನ್​​ ಆರ್ಟ್ಸ್​​ ರಚಿಸಿದ್ದ ಪಾಯಿಂಟಿಲಿಸ್ಟ್​​ ಪೇಂಟಿಂಗ್​ ಅಂತ ಅವರು ಹೇಳಿದ್ದಾರೆ.

ಕಳೆದ ಸೋಮವಾರ ಇದೇ ಪೇಂಟಿಂಗ್​ 30 ಸಾವಿರ ಯೂರೋ(ಅಂದಾಜು ₹24 ಲಕ್ಷ) ಬೆಲೆಗೆ ಹಾರಾಜಾಗಿದೆ. ಪೇಂಟ್​​ ಚುಕ್ಕಿಗಳಿಂದ ಪಾಯಿಂಟಿಲಿಸ್ಟ್​​ ಪೇಂಟಿಂಗ್​ಗಳನ್ನ ರಚಿಸಲಾಗುತ್ತದೆ. ನೆದರ್​​ಲೆಂಡ್ಸ್​​ನಲ್ಲಿ ಕೆಲವೇ ಕೆಲವು ಕಲಾವಿದರು ಪಾಯಿಂಟಿಲಿಸಮ್​​ ಕಲೆಯನ್ನ ಕರಗತ ಮಾಡಿಕೊಂಡಿದ್ದರು ಎಂದು ಹರಾಜುದಾರ ಪೀಟ್​​ ವ್ಯಾನ್​ ಹೇಳಿದ್ದಾರೆ. ಡಚ್​​ ಸಂಗ್ರಹಕಾರರೊಬ್ಬರು ಈ ಪೇಂಟಿಂಗ್​ ಖರೀದಿಸಿದ್ದಾರೆ. ಇತ್ತ ಹೆಂಕ್​​​ ಲಾರ್ಮನ್ಸ್ ತಾನು ಖರ್ಚು ಮಾಡಿದ್ದಕ್ಕಿಂತ 400 ಪಟ್ಟು ಹೆಚ್ಚಿನ ಮೊತ್ತಕ್ಕೆ ಪೇಂಟಿಂಗ್​ ಮಾರಾಟವಾಯ್ತಲ್ಲ ಅಂತ ಫುಲ್​ ಖುಷಿಯಾಗಿದ್ದಾನೆ.