ಕಟ್ಟಡದಿಂದ ಆಯ ತಪ್ಪಿ ಬಿದ್ದು ಕಾರ್ಮಿಕ ಸಾವು

ಬಾಗಲಕೋಟೆ: ಮೂರು ಅಂತಸ್ಥಿನ ಕಟ್ಟಡದಿಂದ ಬಿದ್ದು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿಯ ಏತ ನೀರಾವರಿ ಕಟ್ಟಡದಲ್ಲಿ ನಡೆದಿದೆ.
ಮುತ್ತಪ್ಪ ಮೇಟಿ (28) ಮೃತ ದುರ್ದೈವಿ. ಕೊಪ್ಪಳ ಏತ ನೀರಾವರಿ ಕಟ್ಟಡದಲ್ಲಿ ಪೇಂಟಿಂಗ್ ಕೆಲಸ ಮಾಡುವ ವೇಳೆ ಆಯ ತಪ್ಪಿ ಬಿದ್ದು, ಮುತ್ತಪ್ಪ ಮೇಟಿ ಸಾವನ್ನಪ್ಪಿದ್ದಾರೆ. ಮೃತರು ಹುನಗುಂದ ತಾಲೂಕಿನ ಹೇಮವಾಡಗಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv