ಧೋನಿ ನಾಯಕರಾಗಿದ್ದಾಗ ಒಬ್ಬರು ತಡವಾಗಿ ಬಂದ್ರೆ, ಎಲ್ಲಾ ಆಟಗಾರರಿಗೆ ಶಿಕ್ಷೆ..!

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಧೋನಿ ಆಟಕ್ಕೆ ಎಷ್ಟು ಮಹತ್ವ ಕೊಡ್ತಾರೋ,ಶಿಸ್ತು, ಸಮಯ ಪಾಲನೆಗೂ ಅಷ್ಟೇ ಮಹತ್ವ ಕೊಡ್ತಾರೆ ಅನ್ನೋದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಟೀಂ ಇಂಡಿಯಾದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಅಪ್ಟನ್, ತಾವು ಬರೆದಿರುವ ದಿ ಬೇರ್​ಫೂಟ್ ಕೋಚ್​ ಪುಸ್ತಕದಲ್ಲಿ ಧೋನಿಯ ಕಠಿಣ ರೂಲ್​​ ಬಗ್ಗೆ ಉಲ್ಲೇಖಿಸಿದ್ದಾರೆ.ನಾನು ಟೀಂ ಇಂಡಿಯಾಗೆ ಸೇರಿಕೊಂಡಾಗ ಅನಿಲ್ ಕುಂಬ್ಳೆ ಟೆಸ್ಟ್ ತಂಡದ ನಾಯಕರಾಗಿದ್ರೆ, ಧೋನಿ ಏಕದಿನ ತಂಡಕ್ಕೆ ನಾಯಕರಾಗಿದ್ರು.ಈ ವೇಳೆ ಕೆಲ ಆಟಗಾರರು ಪ್ರಾಕ್ಟಿಸ್ ಸೆಷನ್​ಗೆ ತಡವಾಗಿ ಬರುತ್ತಿದ್ರು.ಇದನ್ನ ತಪ್ಪಿಸಲು ಟೀಂ ಮ್ಯಾನೇಜ್​ಮೆಂಟ್, ನಾಯಕ ಎಲ್ಲರೂ ಸೇರಿ, ತಡವಾಗಿ ಬರುವ ಆಟಗಾರರಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ನಿರ್ಧರಿಸಲಾಯಿತು.ಅದರಂತೆ ಯಾವ ಆಟಗಾರ ತಡವಾಗಿ ಬರುತ್ತಾನೋ,ಆ ಆಟಗಾರ 10 ಸಾವಿರ ರೂಪಾಯಿ ದಂಡ ಪಾವತಿಸಬೇಕಿತ್ತು.ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ರು.ಇದೇ ನಿಯಮವನ್ನ ಏಕದಿನ ತಂಡಕ್ಕೆ ಅನ್ವಯಿಸಲು ಮುಂದಾದಾಗ,ಕ್ಯಾಪ್ಟನ್ ಧೋನಿ ಇದರಲ್ಲಿ ಪ್ರಮುಖ ಬದಲಾವಣೆ ಮಾಡಿದ್ರು.ಅದೇನಂದ್ರೆ, ಪ್ರಾಕ್ಟೀಸ್ ಸೆಷನ್​, ಟೀಂ ಮೀಟಿಂಗ್​ಗೆ ಯಾವುದೇ ಆಟಗಾರ ವಿಳಂಬ ಮಾಡಿದ್ರೂ, ಉಳಿದ ಎಲ್ಲಾ ಆಟಗಾರರು 10 ಸಾವಿರ ದಂಡ ತೆರಬೇಕು ಎಂಬ ಆದೇಶ ಹೊರಡಿಸಿದ್ರು.ಅಷ್ಟೇ, ಈ ರೂಲ್ ಜಾರಿಗೆ ಬಂದಾಗಿನಿಂದ ಯಾವ ಆಟಗಾರರು ಕೂಡ ಲೇಟಾಗಿ ಬರಲೇ ಇಲ್ಲ, ಎಂದು ಪ್ಯಾಡಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.