ವಿದ್ಯುತ್​ ತಂತಿ ಸ್ಪರ್ಶದಿಂದ 2 ಎತ್ತುಗಳ ಸಾವು

ಹರಪನಹಳ್ಳಿ: ವಿದ್ಯುತ್ ತಂತಿ ಸ್ಪರ್ಶದಿಂದ 2 ಎತ್ತುಗಳು ಮೃತಪಟ್ಟಿರುವ ಘಟನೆ ಹರಪನಹಳ್ಳಿ ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ.
ಬಸವನಕೋಟೆ ಗ್ರಾಮದ ಸಿದ್ದೇಶ್​ ಎಂಬುವರಿಗೆ ಸೇರಿದ 2 ಎತ್ತುಗಳು ಅಸುನೀಗಿವೆ. ರಭಸವಾಗಿ ಗಾಳಿ ಬೀಸಿದ್ದ ಪರಿಣಾಮ ವಿದ್ಯುತ್‌ ವಿದ್ಯುತ್​ ತಂತಿ ಕಟ್‌ ಆಗಿ ಜಮೀನಿಗೆ ಸಾಗುವ ರಸ್ತೆಯಲ್ಲಿ ಬಿದ್ದಿತ್ತು. ಸಿದ್ದೇಶ್​ ಜಮೀನಿಗೆ ಬಂಡಿಯಲ್ಲಿ ಹೋಗುವ ವೇಳೆ ಎತ್ತುಗಳು ವಿದ್ಯುತ್​ ತಂತಿ ತುಳಿದು ಸಾವನ್ನಪ್ಪಿದ್ದವು. ಬೆಸ್ಕಾಂ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಸೀಕೆರೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv