ಮೋದಿ, ನಿತೀಶ್ ಕುಮಾರ್ ರಾಜಕೀಯ ಲೈಲಾ ಮಜ್ನು-ಓವೈಸಿ

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಹಾರ ಸಿಎಂ ನಿತೀಶ್​ಕುಮಾರ್​ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನ ಅಸಾದುದ್ದೀನ್ ಓವೈಸಿ ಅಮರ ಪ್ರೇಮಿಗಳಾದ ಲೈಲಾ ಹಾಗೂ ಮಜ್ನುಗೆ ಹೋಲಿಸಿದ್ದಾರೆ. ದೆಹಲಿಯ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓವೈಸಿ, ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ರಾಜಕೀಯ ಲೈಲಾ ಮಜ್ನು ಇದ್ದಂತೆ. ಅವರಲ್ಲಿ ಮಜ್ನು ಯಾರು..? ಲೈಲಾ ಯಾರು..? ಅಂತ ನೀವೇ ನಿರ್ಧರಿಸಿ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ