50ಕ್ಕೂ ಹೆಚ್ಚು ಮಕ್ಕಳನ್ನ ನರಬಲಿ ನೀಡಲಾಗಿರುವ ಜಾಗ ಇದು..!

ಲಿಮಾ: ಧಾರ್ಮಿಕ ಆಚರಣೆಗಾಗಿ ನರಬಲಿ ನೀಡಲಾಗಿದ್ದ 50ಕ್ಕೂ ಹೆಚ್ಚು ಮಕ್ಕಳ ಅವಶೇಷಗಳು ಪೆರು ದೇಶದಲ್ಲಿ ಪತ್ತೆಯಾಗಿದೆ. ಕೊಲಂಬಿಯನ್​ ಪೂರ್ವದ ಚಿಮು ನಾಗರೀಕತೆಯ ಕಾಲದಲ್ಲಿ ಮಕ್ಕಳನ್ನ ಬಲಿ ಕೊಡಲಾಗಿದ್ದು, ಪ್ರಾಚ್ಯ ಶಾಸ್ತ್ರಜ್ಞರು ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ.

ಪೆರುವಿನ ಹುವಾನ್​​ಚಾಕೋದ ಟಪಮಾಪಾ ಲಾ ಕ್ರೂಜ್​​ನಲ್ಲಿ ಈ ನರಬಲಿ ಸ್ಥಳ ಪತ್ತೆಯಾಗಿದೆ. ಈ ಹಿಂದೆ ಕ್ರೂರವಾಗಿ ಕೊಲ್ಲಲಾಗಿದ್ದ 140ಕ್ಕೂ ಹೆಚ್ಚು ಯುವಕರ ಅವಶೇಷಗಳು ಪತ್ತೆಯಾಗಿತ್ತು. ಇದೀಗ ಮಕ್ಕಳ ಅವಶೇಷಗಳು ಪತ್ತೆಯಾಗಿರೋ ಸ್ಥಳ ಇಲ್ಲಿಗೆ ಹತ್ತಿರದಲ್ಲೇ ಇದೆ. ಆದರೆ ಇತ್ತೀಚಿನ ಈ ಆವಿಷ್ಕಾರ ಇನ್ನೂ ದೊಡ್ಡ ಮಟ್ಟದಾಗಿರಬಹುದು ಎಂದು ಊಹಿಸಲಾಗಿದೆ.

ಈವರೆಗೆ ಚಿಮು ನಾಗರೀಕತೆಯವರು ಬಲಿ ನೀಡಿದ್ದ 56 ಮಕ್ಕಳ ಅವಶೇಷಗಳು ಪತ್ತೆಯಾಗಿದೆ ಎಂದು ಪ್ರಾಚ್ಯ ಶಾಸ್ತ್ರಜ್ಞ ಗೇಬ್ರಿಯಲ್ ಪ್ರಿಟೋ ಹೇಳಿದ್ದಾರೆ. 6 ರಿಂದ 14 ವರ್ಷ ವಯಸ್ಸಿನ ಮಕ್ಕಳ ಅವಶೇಷಗಳು ಇದಾಗಿದ್ದು, ಮೇ ತಿಂಗಳಲ್ಲಿ ಪತ್ತೆಯಾಗಿದೆ. ದೇಹಗಳನ್ನು ಕಾಟನ್​ ಬಟ್ಟೆಯಿಂದ ಸುತ್ತಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಎದೆಯ ಭಾಗದಲ್ಲಿನ ಮೂಳೆಯನ್ನ ಕತ್ತರಿಸಿ ಮಕ್ಕಳನ್ನು ಕ್ರೂರವಾಗಿ ಕೊಲ್ಲಲಾಗಿದೆ
ಈ ಹಿಂದೆ 550 ವರ್ಷಗಳಷ್ಟು ಹಳೆಯದಾದ 140 ಮಕ್ಕಳ ಅವಶೇಷಗಳು ಹುವಾನ್​ಚಾಕ್ಯುಟೋದಲ್ಲಿ ಪತ್ತೆಯಾಗಿತ್ತು. ಇದು 2011ರ ಉತ್ಖನನವಾಗಿದ್ದು, 3500 ವರ್ಷ ಹಳೆಯ ದೇವಸ್ಥಾನದಲ್ಲಿ 42 ಮಕ್ಕಳು ಹಾಗೂ 76 ಇಲ್ಲಾಮಾಗಳ ಅವಶೇಷಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv