300 ಪೊಲೀಸರಿಗೂ ಸಿಗ್ಲಿಲ್ಲ ಆ ಗ್ಯಾಂಗ್​​ಸ್ಟರ್ಸ್

ಜೈಪುರ​ : ಜೈಪುರದ ಫತೇಪುರ್​ ಠಾಣೆಯೊಂದರಲ್ಲಿ ನಡೆದ ಪೊಲೀಸ್​ ಪೇದೆ ಮತ್ತು ಸ್ಟೇಷನ್​ ಹೌಸ್​ ಆಫಿಸರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿರುವ ಗ್ಯಾಂಗ್​​ಸ್ಟರ್ಸ್​​ಗಳಾದ ಅಜಯ್​ ಚೌದರಿ ಮತ್ತು ಜಗದೀಪ್​ ಅಲಿಯಾಸ್​ ಧನಕರ್​ನನ್ನು ಹಿಡಿಯಲು 300 ಜನರ ಪೊಲೀಸ್​ ತಂಡವೂ ಫೇಲ್​ ಆಗಿದೆ. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 10 ವಿಶೇಷ ಪೊಲೀಸ್​ ತಂಡಗಳು , ಇಬ್ಬರು ಐಜಿಪಿ, ಮೂವರು ಎಸ್​.ಪಿ, ಮತ್ತು ಹಲವು ಸೀನಿಯರ್​ ಪೊಲೀಸ್​ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸುತ್ತಿದೆ. ಸೆರೆ ಸಿಕ್ಕಿರುವ ಆರೋಪಿಗಳನ್ನು ದಿನೇಶ್​ ಅಲಿಯಾಸ್​ ಲಾರಾ ಮತ್ತು ಕೈಲಾಶ್​ ಅಲಿಯಾಸ್​​ ನಗೌರಿ ಎಂದು ಗುರುತಿಸಲಾಗಿದೆ. ಆದರೆ ಬಂಧಿತ ಆರೋಪಿಗಳು ತಮ್ಮ ಗ್ಯಾಂಗ್​ಸ್ಟರ್ಸ್​ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಸಿಖರ್​ ಜಿಲ್ಲಾ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇನ್ನು ಹರಿಯಾಣದಲ್ಲಿ ರೌಡಿ ಶೀಟರ್​ಗಳನ್ನು ಸಂಪರ್ಕ ಮಾಡುವ ಮೂಲಕ ಅವರ ಸಹಾಯ ಪಡೆದು ಗ್ಯಾಂಗ್​ಸ್ಟರ್ಸ್​​ಗಳನ್ನು ಬಂಧಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಿಖರ್​ ಸೀನಿಯರ್​ ಆಫಿಸರ್​ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv