ವಿಮ್ಸ್​​ ಹೊರಗುತ್ತಿಗೆ ನೌಕರರ ವಜಾ ಆದೇಶ ಖಂಡಿಸಿ ಪ್ರೊಟೆಸ್ಟ್

ಬಳ್ಳಾರಿ: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 180ಕ್ಕೂ ಹೆಚ್ಚು ಕಾರ್ಮಿಕರನ್ನ ವಜಾಗೊಳಿಸಲು ಆದೇಶ ಹೊರಡಿಸಿದೆ. ಇದರಿಂದ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸುಮಾರು 15-20ವರ್ಷಗಳಿಂದ ವಿಮ್ಸ್​​​​​​​ನಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಏಕಾಏಕಿ ವಜಾಗೊಳಿಸಿ ಆದೇಶ ಹೊರಡಿಸಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಎಲ್ಲ ಕಾರ್ಮಿಕರು ಈ ಆದೇಶ ಖಂಡಿಸಿ ವಿಮ್ಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಉದ್ಯೋಗ ಭದ್ರತೆ ಇಲ್ಲದೇ ಎರಡು ದಶಕಗಳ ಕಾಲ ದುಡಿದಿದ್ದೇವೆ. ಈಗ ಏಕಾಏಕಿ ಕೆಲಸದಿಂದ ವಜಾ ಮಾಡಿದರೆ ನಮ್ಮ ಮುಂದಿನ ಜೀವನ ಹೇಗೆ..? ಅಂತಾ ಹೊರಗುತ್ತಿಗೆ ನೌಕರರು ಪ್ರಶ್ನೆ ಮಾಡ್ತಿದ್ದಾರೆ. ನಮ್ಮನ್ನು ನಂಬಿಕೊಂಡು ನಮ್ಮ ಕುಟುಂಬಗಳಿವೆ. ನಮಗೆ ಬೇರೆ ಆದಾಯ ಇಲ್ಲ. ಸೇವಾ ಹಿರಿತನದ ಆಧಾರದ ಮೇಲೆ ನಮ್ಮನ್ನು ಕೆಲಸದಲ್ಲಿ ಮುಂದುವರೆಸಬೇಕು ಅಂತಾ ಕಾರ್ಮಿಕರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv