ರಾಮನಗರದಲ್ಲಿ ಆಪರೇಷನ್​ ಕಾಡಾನೆ ಸಕ್ಸಸ್​

ಮೈಸೂರು: ರಾಮನಗರದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆಯನ್ನ ಅರಣ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಡಾ.ಮುಜೀಬ್, ಶಾರ್ಪ್ ಶೂಟರ್ ವಿಕ್ರಂ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಆನೆಯನ್ನ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ ಆನೆಗಳಾದ ಹರ್ಷ, ದ್ರೋಣ, ಬಲರಾಮ, ಅಭಿಮನ್ಯು ಭಾಗಿಯಾಗಿದ್ದರು.
ಕಾರ್ಯಾಚರಣೆಯಲ್ಲಿ ಸೆರೆಯಾದ ಗಂಡಾನೆಯನ್ನು ನಗರಹೊಳೆ ಅಭಯಾರಣ್ಯದಲ್ಲಿರುವ ಮತ್ತಿಗೋಡು‌ ಆನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ. ಆನೆ ಸೆರೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮೊದಲ ಹಂತದ ಗಜಪಯಣದಲ್ಲಿ ಆನೆಗಳು ಭಾಗಿಯಾಗಿದ್ದು, ಕೆಲ ದಿನಗಳ ವಿಶ್ರಾಂತಿ ಬಳಿಕ ಎರಡನೇ ಹಂತದ ಗಜಪಯಣದಲ್ಲಿ ಮೈಸೂರಿಗೆ ಬರಲಿವೆ. ದ್ರೋಣ, ಹರ್ಷ, ಆಭಿಮನ್ಯೂ, ಬಲರಾಮ, ಕಾವೇರಿ, ವಿಜಯ ಕೂಡಾ ಎರಡನೇ ಹಂತದಲ್ಲಿ ಬರಲಿವೆ. ಇನ್ನು ಆನೆ ಸೆರೆ ಕಾರ್ಯಾಚರಣೆಯಲ್ಲಿದ್ದ ಕಾರಣ ಸೆಪ್ಟೆಂಬರ್ 2 ರ ಗಜಪಯಣಕ್ಕೆ ಆನೆಗಳು ಗೈರಾಗಿದ್ದವು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv