ನಿಮ್ಮ ಮಕ್ಕಳು ಆನ್‌ಲೈನ್‌ ಗೇಮ್‌ ಆಡ್ತಾರಾ..? ಹಾಗಾದ್ರೆ, ಈ ಸ್ಟೋರಿ ಓದ್ಲೇಬೇಕು..!

ನವದೆಹಲಿ: ಈಗಿನ ಮಕ್ಕಳಂತೂ ಆನ್‌ಲೈನ್‌ ಗೇಮ್‌ಗಳಿಗೆ ಜಾಸ್ತಿ ಅಡಿಕ್ಟ್‌ ಆಗ್ಬಿಟ್ಟಿದ್ದಾರೆ. ಬಿಟ್ರೆ ಮೂರ್‌ ಹೊತ್ತು ಬರೀ ಫೋನ್‌ನಲ್ಲೇ ಕಾಲ ಕಳೀತಾರೆ. ಆದ್ರೆ, ಇಂತಹ ಮಕ್ಕಳ ವಿಷಯದಲ್ಲಿ ಈಗ ಎಚ್ಚರಿಕೆ ವಹಿಸಬೇಕಾಗಿದೆ. ಯಾಕಂದ್ರೆ, ಆನ್‌ಲೈನ್‌ ಗೇಮ್ಸ್‌ ಮಕ್ಕಳ ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ ಅಂತಾ ದೆಹಲಿ ಮಕ್ಕಳ ರಕ್ಷಣಾ ಆಯೋಗ ತಿಳಿಸಿದೆ.

‘ಆನ್‌ಲೈನ್‌ ಗೇಮ್‌ಗಳು ಮಕ್ಕಳಿಗೆ ಹಾನಿಕಾರಕ’
ಆನ್‌ಲೈನ್‌ ಗೇಮ್‌ಗಳು ಮಕ್ಕಳಿಗೆ ಮಾರಕ. ಅದ್ರಲ್ಲೂ ಪಬ್‌ಜಿ, ಫೋರ್ಟ್​​ನೈಟ್‌, ಗ್ರ್ಯಾಂಡ್‌ ಥೆಫ್ಟ್‌ ಆಟೋ, ಗಾಡ್‌ ಫಾರ್‌ ವಾರ್‌, ಹಿಟ್‌ಮ್ಯಾನ್‌ ಗೇಮ್‌ಗಳು ಮಕ್ಕಳ ಮೆದುಳಿಗೆ ಹಾನಿಕಾರಕ ಅಂತಾ ದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ. ಈಗಾಗ್ಲೇ ಗುಜರಾತ್‌ ಸರ್ಕಾರ ತಮ್ಮ ರಾಜ್ಯದಲ್ಲಿ ಆನ್‌ಲೈನ್‌ ಮಲ್ಟಿ ಪ್ಲೇಯರ್‌ ಗೇಮ್‌ಗಳನ್ನ ಅದ್ರಲ್ಲೂ ಇತ್ತೀಚೆಗೆ ಮಕ್ಕಳಲ್ಲದೇ ದೊಡ್ಡವರಿಗೂ ತಲೆಕೆಡಿಸಿರುವ ಪಬ್‌ಜಿ ಅನ್ನೋ ಗೇಮ್‌ನ್ನು ಪ್ರಾಥಮಿಕ ಶಾಲೆಗಳಲ್ಲಿ ನಿಷೇಧಿಸಿದೆ. ಅಷ್ಟೇ ಅಲ್ಲದೆ, ಮೊನ್ನೆಯಷ್ಟೇ ನರೇಂದ್ರ ಮೋದಿ ಹಮ್ಮಿಕೊಂಡಿದ್ದ ‘ಪರೀಕ್ಷಾ ಪೇ ಚರ್ಚಾ 2.o’ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ತಮ್ಮ ಮಗ ಆನ್‌ಲೈನ್‌ ಗೇಮ್‌ಗೆ ಅಡಿಕ್ಟ್‌ ಆಗಿದ್ದಾನೆ ಅಂತಾ ಪ್ರಶ್ನಿಸಿದ್ರು. ಆಗ ಉತ್ತರಿಸಿದ ಮೋದಿ, ಇಲ್ಲಿ ಪಬ್‌ಜಿ ಆಡೋರು ಇದ್ದೀರಾ ಅಂತಾ ಕಿಚಾಯಿಸಿದ್ರು. ಆಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲಾ ನಗೆಗಡಲಲ್ಲಿ ತೇಲಾಡಿದ್ರು. ಬಳಿಕ ಮಾತನಾಡಿದ ಮೋದಿ, ತಂತ್ರಜ್ಞಾನ ಅನ್ನೋದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು. ನಾವು ನಮ್ಮ ಮಕ್ಕಳಿಗೆ ತಂತ್ರಜ್ಞಾನದಿಂದ ಒಳ್ಳೆಯದನ್ನ ಪಡೆಯಲು ಮಾರ್ಗದರ್ಶನ ನೀಡಬೇಕು. ಒಂದು ವೇಳೆ ಪೋಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದ್ರೆ ಅವ್ರು ಪ್ಲೇ ಸ್ಟೇಷನ್‌ನಿಂದ ಆಟದ ಮೈದಾನಕ್ಕೆ ಹೋಗ್ತಾರೆ ಅಂತಾ ಉತ್ತರಿಸಿದ್ರು. ಇದೀಗ, ಮಕ್ಕಳ ಆನ್‌ಲೈನ್‌ ಗೇಮ್‌ಗಳ ಬಗ್ಗೆ ಅಧ್ಯಯನ ಮಾಡಿದಾಗ ಅವು ಮಕ್ಕಳಿಗೆ ಒಳ್ಳೆಯದಲ್ಲ ಅಂತಾ ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ. ಯಾವುದಕ್ಕೂ ನಿಮ್ಮ ಮಕ್ಕಳು ಆನ್‌ಲೈನ್‌ ಗೇಮ್‌ಗೆ ಅಡಿಕ್ಟ್‌ ಆಗಿದ್ರೆ ಕೂಡಲೇ ಅದರಿಂದ ಹೊರತರಲು ಪ್ರಯತ್ನಿಸಿ. ಇಲ್ಲವಾದ್ರೆ, ಆನ್‌ಲೈನ್‌ ಗೇಮ್‌ಗಳು ನಿಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಅನಾಹುತಗಳಾಗಬಹುದು.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv