ಆನ್​ ಲೈನ್​ನಲ್ಲಿ ಲೈಂಗಿಕ ಕಿರುಕುಳ ಕೊಟ್ಟ ದೆಹಲಿ ಬಾಸ್​..!

ಬೆಂಗಳೂರು: ಆನ್‌ಲೈನ್​ನಲ್ಲಿ ಮಾರ್ಕೆಟಿಂಗ್​ ಕೆಲಸ ಮಾಡುತ್ತಿದ್ದ ಮಹಿಳೆಗೆ ದೆಹಲಿಯಲ್ಲಿರುತ್ತಿದ್ದ ಆಕೆಯ ಬಾಸ್​ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ಬೆಳಕಿಗೆ  ಬಂದಿದೆ. ನನ್ನ ಬಾಸ್​ ನನಗೆ ಲೈಂಗಿಕ ಕಿರುಕುಳ ಕೊಡ್ತಿದ್ದಾನೆ ಅಂತಾ ಸಂತ್ರಸ್ತ ಮಹಿಳೆ ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ದೆಹಲಿ ಮೂಲದ ‘ಲಾ ಕ್ಲಾಸಿ ಟ್ರಾನ್ಸ್ಯಾಕ್ಷನ್ಸ್​ ಲಿಮಿಟೆಡ್’ ಎಂಬ ಕಂಪನಿಯಲ್ಲಿ ಬೆಂಗಳೂರಿನ ಮಹಿಳೆ ​ಆನ್​ ಲೈನ್​ ಮಾರ್ಕೆಟಿಂಗ್​ ಕೆಲಸ ಮಾಡುತ್ತಿದ್ದರು. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಕೆಲಸ ಮಾಡುತ್ತಿದ್ದಳು. ಕಂಪನಿಯ ಎಂ.ಡಿ ಮನೋಹರ್ ರೋಷನ್ ದೆಹಲಿಯಲ್ಲಿ ಇರುತ್ತಿದ್ದ. ಮಹಿಳೆಯ ದೂರವಾಣಿ‌ ಸಂಖ್ಯೆ ಪಡೆದ ಈತ ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸುತ್ತಿದ್ದನಂತೆ. ಅಲ್ಲದೇ ಹೋಟೆಲ್​ಗೆ ಬರುವಂತೆ ದಿನನಿತ್ಯವೂ ವಾಟ್ಸಪ್ ಮೂಲಕ ಕಿರುಕುಳ ಕೊಡುತ್ತಿದ್ದ ಅಂತಾ ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ಅಶೋಕ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು ಲಾ ಕ್ಲಾಸಿ ಟ್ರಾನ್ಸ್ಯಾಕ್ಷನ್​ನ ಎಂ.ಡಿ ತಲೆಮರೆಸಿಕೊಂಡಿದ್ದು, ಆರೋಪಿ ಮನೋಹರ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv