ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು

ಧರ್ಮಸ್ಥಳ: ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ನೆರಿಯ ಗ್ರಾಮದ ಅಂಬಟಮಲೆ ಕಾಡಿನಲ್ಲಿ ನಡೆದಿದೆ. ನೆರಿಯಾ ಗ್ರಾಮದ ಜೇಮ್ಸ್ (55) ಮೃತ ವ್ಯಕ್ತಿ. ಎಸ್ಟೇಟ್ ಒಂದರಲ್ಲಿ ಮೇಲ್ವಿಚಾರಕರಾಗಿದ್ದ ಜೇಮ್ಸ್, ನಿನ್ನೆ ರಾತ್ರಿ ಕೆಲಸಕ್ಕೆ ಹೋಗಿದ್ದರು. ಇಂದು ಮನೆಗೆ ಹಿಂದಿರುಗಿ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಮನೆಯವರಿಗೆ ಅಂಬಟಮಲೆಯ ನದಿಯಲ್ಲಿ ಜೇಮ್ಸ್ ಶವ ಪತ್ತೆಯಾಗಿದೆ. ಕಾಡು ಪ್ರಾಣಿಯ ಭಯದಿಂದ ಕೋವಿ ಹಿಡಿದುಕೊಂಡಿದ್ದ ಜೇಮ್ಸ್, ನದಿ ದಾಟುವ ವೇಳೆ ಜಾರಿ ಬಿದ್ದು ಗುಂಡು ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv