625 ಕ್ಕೆ ಒಂದೇ ಮಾರ್ಕ್ಸ್​ ಕಮ್ಮಿ ಇತ್ತು..ಈಗ ಅದು ಬಂತು..!

ಬೆಳಗಾವಿ: ಜಿಲ್ಲೆಯ ಸೆಂಟ್​ ಕ್ಸೇವಿಯರ್​ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಮೊಹಮ್ಮದ್​ ಕೈಫ್​ ಎಸ್​​ಎಸ್​ಎಲ್​ಸಿಯಲ್ಲಿ 625 ಕ್ಕೆ 624 ಅಂಕ ಗಳಿಸಿದ್ದ. ಆದರೆ ಮೊಹಮ್ಮದ್​ಗೆ ಯಾಕೋ ಸಮಾಧಾನ ಎನ್ನಿಸಿರಲಿಲ್ಲ. ಹಾಗಾಗಿ ಮತ್ತೆ ರಿವ್ಯಾಲ್ಯುವೇಶನ್​ಗೆ ಹಾಕಿದ್ದ. ಇದೀಗ ಆತ ಅದರಲ್ಲೂ ಸಕ್ಸಸ್​ ಕಂಡಿದ್ದಾನೆ. ಮರುಮೌಲ್ಯಮಾಪನದಲ್ಲಿ ಸೈನ್ಸ್​ನಲ್ಲಿ ಕಮ್ಮಿಯಾಗಿದ್ದ ಒಂದು ಮಾರ್ಕ್​ ಕೂಡ ಮೊಹಮ್ಮದ್​ಗೆ ಸಿಕ್ಕಿದೆ.

ಈ ಮೂಲಕ ಮೊಹಮ್ಮದ್​ 13 ಲಕ್ಷ ವಿಧ್ಯಾರ್ಥಿಗಳಲ್ಲಿ ಟಾಪ್​ ಮೋಸ್ಟ್​ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾನೆ. ಮುಂದೆ ಐಎಎಸ್​ ಅಧಿಕಾರಿಯಾಗುವ ಕನಸು ಹೊಂದಿರುವ ಈತ​ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನದ ಪಣ ತೊಡುವುದಾಗಿ ಸಂಕಲ್ಪ ಮಾಡಿದ್ದಾನೆ. ಶಿಕ್ಷಕ ದಂಪತಿಯ ಪುತ್ರನ ಈ ಕನಸು ನಸಾಗಲಿಎನ್ನುವ ಹಾರೈಕೆಗಳು ಎಲ್ಲೆಡೆಯಿಂದ ವ್ಯಕ್ತವಾಗ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv