ನೋವಿನಲ್ಲೂ ಆರ್​ಸಿಬಿ ತಂಡಕ್ಕಾಗಿ ಶ್ರಮಿಸುತ್ತಿರುವ ಪಾರ್ಥಿವ್

ಅಭಿಮಾನಿಗಳು ಈ ಸಲ ಕಪ್ ನಮ್ದೇ ಅಂತಿದ್ರೂ ಕೂಡ ಆರ್​ಸಿಬಿ ಸೋಲಿನ ಸುಳಿಯಿಂದ ಹೊರಗೆ ಬರುತ್ತಿಲ್ಲ. ಘಟಾನುಘಟಿ ಆಟಗಾರರಿದ್ರೂ ಒಂದೇ ಒಂದು ಪಂದ್ಯ ಗೆಲ್ಲದೆ ಫ್ಯಾನ್ಸ್​ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಆದ್ರೆ ಆರ್​ಸಿಬಿಯ ವಿಕೆಟ್​ ಕೀಪರ್​ ಬ್ಯಾಟ್ಸ್​ಮೆನ್​ ಪಾರ್ಥಿವ್ ಪಟೇಲ್ ತಂಡಕ್ಕೆ ಅಲ್ಪ ಕಾಣಿಕೆ ನೀಡಲು ನೆರವಾಗ್ತಿದ್ದಾರೆ. ಆದ್ರೆ ಅವರಿಗೆ ಆರ್​ಸಿಬಿಯ ಸತತ ಸೋಲಿನ ನೋವಿನ ಜೊತೆ ವೈಯಕ್ತಿಕ ಜೀವನದಲ್ಲೂ ನೋವೊಂದು ಕಾಡುತ್ತಿದೆ. ಪಾರ್ಥಿವ್ ಪಟೇಲ್​ ತಂದೆ ಅಜಯ್​ ಪಟೇಲ್ ಮೆದುಳು ಸಂಬಂಧಿ ಕಾಯಿಲೆಯಿಂದ ಗುಜರಾತನ್​ ಅಹಮದಾಬಾದ್​ ಆಸ್ಪತ್ರೆಯ ಐಸಿಯುನಲ್ಲಿ ಕೋಮಾ ಸ್ಥಿತಿಯಲ್ಲಿದ್ದಾರೆ.
ವೈದ್ಯರಿಂದ ಬ್ಯಾಡ್ ನ್ಯೂಸ್ ಬರದೇ ಇರಲಿ ಅಂತಾ ಪ್ರತಿನಿತ್ಯ ನಾನು ದೇವರ ಬಳಿ ಪ್ರಾರ್ಥಿಸುತ್ತೇನೆ. ಕ್ರೀಡಾಂಗಣಕ್ಕಿಳಿದಾಗ ತಂದೆಯ ಅನಾರೋಗ್ಯದ ವಿಚಾರ ನನ್ನ ತಲೆಗೆ ಬರಲ್ಲ. ಆದ್ರೆ ಒಮ್ಮೆ ಮ್ಯಾಚ್ ಮುಗಿದು ಡ್ರೆಸ್ಸಿಂಗ್​ ರೂಮ್​ಗೆ ಬಂದ ಮೇಲೆ ತಲೆಯಲ್ಲಿ ತಂದೆಯ ಆರೋಗ್ಯದ ಬಗ್ಗೆಯೇ ಓಡುತ್ತಿರುತ್ತೆ. ಹೀಗಾಗಿ ಪ್ರತಿ ಮ್ಯಾಚ್​​ ಮುಗಿದ ಬಳಿಕ ಅಹಮದಾಬಾದ್​ಗೆ ತೆರಳಿ ಅವರನ್ನು ನೋಡಿಕೊಂಡು ಬರುತ್ತೇನೆ. ಬಳಿಕ ತಂಡ ಸೇರಿಕೊಂಡು ಪಂದ್ಯಕ್ಕೆ ಸಜ್ಜಾಗುವೆ ಅಂತಾ ಪಾರ್ಥಿವ್ ನೋವು ತೋಡಿಕೊಂಡಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv