ಚುನಾವಣೆಯ ಮತದಾನದ ದಿನದಂದೂ ಸರ್ಕಾರಿ ಶಾಲೆಗೆ ರಜೆ ನೀಡ್ಲಿಲ್ಲ..!

ಬೆಳಗಾವಿ: ರಾಯಭಾಗ ತಾಲೂಕಿನ ಮಂಟೂರು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರು ಮಹಾ ಯಡವಟ್ಟು ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನದ ದಿನದಂದೂ ಶಾಲೆಗೆ ರಜೆ ನೀಡದೇ ಶಾಲೆ ನಡೆಸಿದ್ದಾರೆ. ವಿಶೇಷ ಅಂದ್ರೆ ಒಂದು ಕಡೆ ಮತದಾನ ಮಾಡಲು ಮತದಾರರು ಸಾಲುಗಟ್ಟಿ ನಿಂತಿದ್ದರೆ. ಇನ್ನೊಂದು ಕಡೆ ವಿದ್ಯಾರ್ಥಿಗಳು ಬಿಸಿಯೂಟಕ್ಕೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿದೆ. ಇದಾದ ನಂತರ ಎಚ್ಚೆತ್ತ ಶಿಕ್ಷಕರು ಚುನಾವಣೆ ಅರಿವಿಗೆ ಬಂದು ಶಾಲೆಗೆ ರಜೆ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv