30 ಅಡಿ ಆಳದ ಕಂದಕಕ್ಕೆ ಬಿದ್ದ ಓಮಿನಿ

ಚಿಕ್ಕಮಗಳೂರು: ಅತಿವೇಗವಾಗಿ ಬಂದ ಜೀಪ್​ನ್ನ ತಪ್ಪಿಸಲು ಹೋಗಿ 30 ಅಡಿ ಆಳದ ಕಂದಕಕ್ಕೆ ಓಮಿನಿ ಬಿದ್ದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮುಳಯ್ಯನ ಗಿರಿ ಪ್ರದೇಶದಲ್ಲಿ ನಡೆದಿದೆ. ಸದ್ಯ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಮುಳ್ಳಯ್ಯನಗಿರಿ ವೀಕ್ಷಣೆಗೆಂದು ಶಿವಮೊಗ್ಗದಿಂದ   ಪ್ರವಾಸಿಗರು ಬಂದಿದ್ದರು  ತಿಳಿದು ಬಂದಿದೆ. ಜಿಲ್ಲಾಡಳಿತ ಜೀಪ್​ ಪ್ರವೇಶಕ್ಕೆ ಕಡಿವಾಣ ಹಾಕಿದ್ರು ಜೀಪ್​ ಮಾಲೀಕ ಲೆಕ್ಕಿಸದೇ ಪ್ರಯಾಣೀಕರನ್ನ ಕರೆದುಕೊಂಡು ಹೋಗ್ತಿದ್ರು.  ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv