ಗ್ಯಾಸ್​ ಚಾಲಿತ ಓಮ್ನಿ ಕಾರಲ್ಲಿ ಬೆಂಕಿ: ಹೋಟೆಲ್​ ಸೇರಿ 2 ದ್ವಿಚಕ್ರ ವಾಹನ ಭಸ್ಮ

ಯಾದಗಿರಿ: ಆಕಸ್ಮಿಕವಾಗಿ ಗ್ಯಾಸ್​ ಚಾಲಿತ ಓಮ್ನಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಕ್ಕದಲ್ಲಿನ ಹೊಟೇಲ್​ಗೆ ತಗುಲಿ ಎರಡೂ​ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಗುರುಮಿಠಕಲ್ ತಾಲೂಕಿನ ಪೋಲಿಸ್ ವಸತಿ ಗೃಹಗಳ ಮುಂಭಾಗ ನಡೆದಿದೆ. ಗ್ಯಾಸ್​ ಚಾಲಿತ ಓಮ್ನಿ ವಾಹನವು ರಿಪೇರಿಗಾಗಿ ನಗರದ ‘ರಾಕೇಶ್ ದ್ವಿಚಕ್ರ ವಾಹನ ಮೆಕ್ಯಾನಿಕ್​ ಶಾಪ್​’ಗೆ ಬಂದಿತ್ತು. ಮೆಕಾನಿಕ್​ ಒಬ್ಬರು ವಾಹನದ ಗ್ಯಾಸ್​ ಪರಿಶೀಲಿಸುತ್ತಿರುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಪಕ್ಕದಲ್ಲಿನ ಹೋಟೆಲ್​ಗೂ ತಗುಲಿ ಹೋಟೆಲ್​ ಸೇರಿದಂತೆ ಎರಡು ದ್ವಿಚಕ್ರವಾಹನ ಸಂಪೂರ್ಣ ಸುಟ್ಟು ಕರುಕಲಾಗಿದೆ. ಅಲ್ಲದೆ ಸುತ್ತಮುತ್ತಲ ಅಂಗಡಿಗಳೂ ಸ್ವಲ್ಪಮಟ್ಟಿಗೆ ಸುಟ್ಟು ಹೋಗಿವೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv