ಬೈಕೇರಿ ಬಂದ್ರು.. ಮುಖಕ್ಕೆ ಕಾರದ ಪುಡಿ ಎರಚಿದ್ರು.. ಮುಂದೆ..?

ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬೈಕಿನಲ್ಲಿ ಬಂದ ಖದೀಮರು ವೃದ್ಧೆಯೊಬ್ಬರ ಕಣ್ಣಿಗೆ ಖಾರದ ಪುಡಿಯನ್ನು ಚಿಮುಕಿಸಿ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನ ದೋಚಿದ್ದಾರೆ. ಉತ್ತರ ತಾಲೂಕಿನ ಹೆಸರಘಟ್ಟ ಬಳಿಯ ದೊಡ್ಡಬ್ಯಾಲಕೆರೆ ನಿವಾಸಿ ಮುನಿಯಮ್ಮ ಅನ್ನೋರ ಸರವನ್ನ ಕಳೆದುಕೊಂಡವರು. ಬೈಕಿನಲ್ಲಿ ಬಂದ ಕಳ್ಳರು ಮುನಿಯಮ್ಮರ ಮುಖಕ್ಕೆ ಖಾರದ ಪುಡಿ ಸೋಕಿದ್ದಾರೆ. ಅಲ್ಲದೇ ಅವರ ಮೂಗಿಗೆ ಕರವಸ್ತ್ರ ಹಿಡಿದು ಕೊರಳಿನಲ್ಲಿದ್ದ 65 ಗ್ರಾಂ ಚಿನ್ನದ ಸರವನ್ನ ಕಿತ್ಕೊಂಡು ಎಸ್ಕೆಪ್ ಆಗಿದ್ದಾರೆ. ಪ್ರಕರಣದ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv