ಸ್ತನದ ಆರೈಕೆ ಮಾಡೋದು ಹೇಗೆ..?

ಅದೆಷ್ಟೋ ಮಹಿಳೆಯರು ಈಗಲೂ ಸ್ತನದ ಆರೋಗ್ಯದ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಸ್ತನದ ಆರೈಕೆ ಮಾಡುವುದರಿಂದ ಸ್ತನ ಕ್ಯಾನ್ಸರ್‌ನಂಥ ಮಾರಕ ರೋಗ ಬರುವುದನ್ನು ತಡೆಗಟ್ಟಬಹುದು ಹಾಗೂ ಸೌಂದರ್ಯವರ್ಧನೆ ಮತ್ತಿತರ ಪ್ರಯೋಜನಗಳನ್ನು ಪಡೆಯಬಹುದು. ಅಷ್ಟಕ್ಕೂ ಸ್ತನದ ಆರೈಕೆ ಮಾಡೋದು ಹೇಗೆ.?
ಬ್ರೆಸ್ಟ್​ ಮಸಾಜ್​..!
ಹೌದು, ಸ್ತನದ ಆರೈಕೆಗೆ ಸ್ತನ ಮಸಾಜ್‌ ಅತ್ಯುತ್ತಮವಾದ ವಿಧಾನ. ಪ್ರತಿನಿತ್ಯ ಸ್ತನವನ್ನು ಮಸಾಜ್​ ಮಾಡುವುದರಿಂದ ಸ್ತನದ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೆ, ಕ್ಯಾನ್ಸರ್​ನಂತಹ ರೋಗಗಳಿಂದ ದೂರವಿರಬಹುದು. ಸ್ತನದಲ್ಲಾಗುವ ಗಡ್ಡೆಗಳಿಂದಲೂ ತಪ್ಪಿಸಿಕೊಳ್ಳಬಹುದು.
ಕೊಬ್ಬರಿ ಎಣ್ಣೆಯೇ ಸ್ತನದ ಸಂಜೀವಿನಿ..!
ಕೈಗೆ ಕೊಬ್ಬರಿ ಎಣ್ಣೆ ಹಾಕಿ ಎರಡು ಕೈಗಳಿಂದ ನಿಧಾನವಾಗಿ ಸ್ತನವನ್ನು ಮಸಾಜ್‌ ಮಾಡಿ. ಮಸಾಜ್ ಮಾಡುವಾಗ ಬೆರಳನ್ನು ವೃತ್ತಾಕಾರವಾಗಿ ಸ್ತನದ ಮೇಲೆ ಆಡಿಸುತ್ತಾ ಮೇಲ್ಮುಖವಾಗಿ ಮಸಾಜ್‌ ಮಾಡಬೇಕು. ನಂತರ ಸ್ತನದ ನಿಪ್ಪಲ್‌ ಕಡೆಗೆ ಮಸಾಜ್‌ ಮಾಡಬೇಕು. ಈ ರೀತಿ ಮೇಲ್ಮುಖ ಹಾಗೂ ಕೆಳಮುಖವಾಗಿ 36 ಬಾರಿ ಮಾಡಬೇಕು. ಇದರಿಂದ ಸ್ತನದಲ್ಲಿ ಉಂಟಾಗುವ ಚಿಕ್ಕ-ಚಿಕ್ಕ ಗಡ್ಡೆಗಳನ್ನು ತಡೆಯಬಹುದು, ಒಂದು ವೇಳೆ ಗಡ್ಡೆ ಉಂಟಾಗಿದ್ದರೆ ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ ಅಪಾಯದಿಂದ ಪಾರಾಗಬಹುದು. ಹೀಗೆಂದು ಅಲ್ಜೈಮರ್​ ಡಿಸೀಸ್​ ಎಂಬ ಪುಸ್ತಕರದಲ್ಲಿ ಡಾಕ್ಟರ್​ ಮೇರಿ ತಮ್ಮ ಅನುಭವವನ್ನು ಬರೆದಿದ್ದಾರೆ.
ಮತ್ತಷ್ಟು ಉಪಯೋಗಗಳು
ಸ್ತನ ಜೋತು ಬೀಳುವುದಿಲ್ಲ
ಆಕರ್ಷಕ ಶೇಪ್‌ ಪಡೆಯಬಹುದು
ಲವ್‌ ಹಾರ್ಮೋನ್‌ ಉತ್ಪತ್ತಿಯಾಗುವುದು
ಲೈಂಗಿಕ ಆಸಕ್ತಿ ಹೆಚ್ಚುವುದು
ಲವ್‌ ಹಾರ್ಮೋನ್​ನಿಂದ ಖುಷಿ-ಖುಷಿಯಾಗಿ ಇರುವಿರಿ
ಆಕ್ಸಿಟೋಸಿನ್, ಪ್ರೊಲಾಕ್ಟಿನ್‌, ಈಸ್ಟ್ರೋಜಿನ್‌ ಬಿಡುಗಡೆಯಾಗುತ್ತವೆ
ಇವು ಸೌಂದರ್ಯವನ್ನು ವೃದ್ಧಿಸುವ ಹಾರ್ಮೋನ್‌ಗಳಾಗಿವೆ

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv