ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಎಸ್​​​​ಟಿ ಸಮುದಾಯಕ್ಕೆ ಅನ್ಯಾಯ

ರಾಯಚೂರು: ರಾಯಚೂರು ನಗರಸಭೆ ವಾರ್ಡ್​ವಾರು ಮೀಸಲಾತಿಯಲ್ಲಿ ಎಸ್​.ಟಿ ಸಮುದಾಯಕ್ಕೆ ಅನ್ಯಾಯವಾಗಿದೆ ಅಂತಾ ಹೈದ್ರಾಬಾದ್ ಕರ್ನಾಟಕ ವಾಲ್ಮಿಕಿ ನಾಯಕ ಸಂಘ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ವಿಭಾಗಿಯ ಕಾರ್ಯದರ್ಶಿ ರಘುವೀರ ನಾಯಕ್ ಮೀಸಲಾತಿ ಪರಿಶೀಲನೆಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. 35 ವಾರ್ಡ್​ಗಳ ಪೈಕಿ ವಾರ್ಡ್​ ಸಂಖ್ಯೆ 35ರ ಅಸ್ಕಿಹಾಳ ಒಂದನ್ನು ಮಾತ್ರ ಎಸ್​.ಟಿಗೆ ಮೀಸಲಿಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ನಾಯಕ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ‌. ಆದ್ರು ಸರಿಯಾಗಿ ಪರಿಶೀಲನೆ ಮಾಡದೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಎಸ್ ಟಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಎಸ್.ಟಿ ಪಂಗಡಕ್ಕೆ ಕೇಂದ್ರ ಸರ್ಕಾರದ ಪ್ರಕಾರ ಶೇಕಡಾ 7.03% ಅಂದ್ರೆ 3 ವಾರ್ಡ್​ಗಳು ಹಾಗೂ ರಾಜ್ಯ ಸರ್ಕಾರದ ಪ್ರಕಾರ ಶೇಕಡಾ 3% ರಷ್ಟು ಅಂದ್ರೆ 2 ವಾರ್ಡ್​ಗಳು ಎಸ್.ಟಿಗೆ ಮೀಸಲು ಮಾಡಬೇಕು. ಆದ್ರೆ ಅಧಿಕಾರಿಗಳು ಸರಿಯಾಗಿ ರೋಸ್ಟರ್ ಅನುಸರಿಸದೇ ಎಸ್.ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಹಾಗಾಗಿ ಮೀಸಲಾತಿ ಮರು ಪರಿಶೀಲನೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸುತ್ತಿದ್ದು, ನ್ಯಾಯಕ್ಕಾಗಿ ಕಾನೂನಿನ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv