ಪೆನ್ಸಿಲ್​ ಮೇಲೆ ಅರಳಿದ ವಿಶ್ವಕಪ್ ಟ್ರೋಫಿ..!

ಕ್ರಿಕೆಟ್​ ಲೋಕದ ಮಹಾಹಬ್ಬ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ನಾಳೆಯಿಂದ ಚಾಲನೆ ಸಿಗಲಿದೆ. ಭಾರತದಲ್ಲಂತೂ ವಿಶ್ವಕಪ್ ಫೀವರ್ ತುಸು ಹೆಚ್ಚಾಗಿದೆ.ಅಭಿಮಾನಿಗಳು ಟೀಂ ಇಂಡಿಯಾಗೆ ಬೆಂಬಲಿಸಲು, ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೇ ಇನ್ನು ಕೆಲ ಅಭಿಮಾನಿಗಳು ತಮ್ಮ ಪ್ರತಿಭೆಯ ಮೂಲಕ ವಿಭಿನ್ನವಾಗಿ ವಿಶ್ವಕಪ್ ಟೂರ್ನಿಯನ್ನ ಪ್ರಮೋಟ್​ ಮಾಡುತ್ತಿದ್ದಾರೆ. ಒಡಿಶಾದ ಶಿಲ್ಪಿ,ಕಲಾಕಾರ ಎಲ್.ಈಶ್ವರ್ ರಾವ್ ಎನ್ನುವವರು ಹುಣಸೆ ಬೀಜಗಳನ್ನ ಬಳಸಿ, ಪೆನ್ಸಿಲ್​ ಟಿಪ್​ ಮೇಲೆ ವಿಶ್ವಕಪ್ ಕಲಾಕೃತಿ ರಚಿಸಿದ್ದಾರೆ. ವಿಭಿನ್ನವಾಗಿ ವಿಶ್ವಕಪ್ ಕಲಾಕೃತಿ ರಚಿಸುವ ಉದ್ದೇಶ ನನ್ನ ತಲೆಯಲ್ಲಿತ್ತು. ಹೀಗಾಗಿ ಹುಣಸೆ ಬೀಜಗಳ ಮೂಲಕ ವಿಶ್ವಕಪ್ ತಯಾರಿಸಿದೆ.ಈ ಕಾರ್ಯ ಬಹಳ ಕಷ್ಟವಾಗಿತ್ತು.ಈ ಕೆತ್ತನೆಗಾಗಿ ಎರಡು ದಿನ ತಗೆದುಕೊಂಡೆ ಎಂದು ರಾವ್ ತಿಳಿಸಿದ್ದಾರೆ.ನಾಳೆಯಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಲಂಡನ್​ನ ಕೆನ್ನಿಂಗ್ಟನ್​ ಓವಲ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ, ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಡಲಿವೆ. ಟೂರ್ನಿಯಲ್ಲಿ ಟೀಂ ಇಂಡಿಯಾ ಅಭಿಯಾನ ಜೂ.5ರಿಂದ ಆರಂಭವಾಗಲಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv