ನಗರವಾಸಿಗಳಿಗಿಂತ ಹಳ್ಳಿಗರಲ್ಲೇ ಹೆಚ್ಚುತ್ತಿದೆ ಬೊಜ್ಜುತನದ ಸಮಸ್ಯೆ

ಸ್ಥೂಲಕಾಯ ಸಮಸ್ಯೆ ನಗರ ವಾಸಿಗಳಿಗಿಂತ ಹಳ್ಳಿ ಜನರಲ್ಲೇ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ವಿಶ್ವಾದ್ಯಂತ ನಡೆದ ಸಂಶೋಧನೆಯಿಂದ ತಿಳಿದು ಬಂದಿದೆ ಅಂತಾ ‘ಜರ್ನಲ್​ ನೇಚರ್​’ ಪತ್ರಿಕೆ ವರದಿ ಮಾಡಿದೆ.

ಈ ಸಂಶೋಧನೆಗಾಗಿ, 1985 ರಿಂದ 2017ರವರೆಗೆ, 200 ದೇಶಗಳಿಂದ 112 ಲಕ್ಷ ಜನರ. ಹೈಟ್, ತೂಕ ಆಧಾರದ ಮೇಲೆ ಅನಲೈಸ್ ಮಾಡಲಾಗಿದೆ.ಇದರ ಆಧಾರದ ಮೇಲೆ ನಗರವಾಸಿಗಳಿಂತ ಹಳ್ಳಿಗಾಡಿನ ಜನರಲ್ಲೇ ಸ್ಥೂಲಕಾಯ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ

ಮನುಷ್ಯರ ಆರೋಗ್ಯವನ್ನ ಅಳೆಯಲು ಬಾಡಿ ಮಾಸ್​ ಇಂಡೆಕ್ಸ್( BMi)​ ಎಂಬ ಮಾನದಂಡವನ್ನ ವಿಶ್ವದಾದ್ಯಂತ ಬಳಸಲಾಗುತ್ತದೆ. ಇದರ ಪ್ರಕಾರ 1985 ರಿಂದ 2017ವರೆಗೂ ಜಗತ್ತಿನಾದ್ಯಂತ ಮಹಿಳೆಯರ ದೇಹದ ತೂಕ ಪ್ರತಿ ಚದರ ಮೀಟರ್​ಗೆ ಸುಮಾರು ಎರಡು ಕೆ.ಜಿಯಷ್ಟು ಹೆಚ್ಚಾಗಿದೆಯಂತೆ. ಇನ್ನು ಪುರುಷರ ದೇಹದ ತೂಕ,  ಪ್ರತಿ ಚದರ ಮೀಟರ್​ಗೆ ಸುಮಾರು ಎರಡು ಕೆ.ಜಿ, 200ಗ್ರಾಂ ನಷ್ಟು ಹೆಚ್ಚಾಗಿದೆಯಂತೆ. ಇದೆ ಕಾಲಾವಧಿಯಲ್ಲಿ ನಗರವಾಸಿ ಮಹಿಳೆಯರ ದೇಹ ಪ್ರತಿ ಚದರ ಮೀಟರ್​ಗೆ ಸುಮಾರು 1.3 ಕೆ.ಜಿ ಹಾಗೂ ಪುರುಷರ ದೇಹದ ತೂಕ 1.6 ಕೆ.ಜಿಯಷ್ಟು ಹೆಚ್ಚಾಗಿದೆಯಂತೆ. 1985ನೇ ವರ್ಷದ ಜನರ ಸಾಮನ್ಯ ತೂಕಕ್ಕೆ ಹೋಲಿಸಿದರೆ ಜನರ ದೇಹದ ಸಾಮಾನ್ಯ ತೂಕ ಸುಮಾರು 5ರಿಂದ 6 ಕೆ.ಜಿ ಹೆಚ್ಚಾಗಿದೆ. ಇತ್ತೀಚಿಗೆ ಹಳ್ಳಿಗಳಲ್ಲಿನ ಜನರ ಆದಾಯ ಹೆಚ್ಚಾಗುತ್ತಿದೆ. ಹಿಂದೆ ಹಳ್ಳಿಗಳಲ್ಲಿನ ಜನರು ಹೆಚ್ಚಾಗಿ ದೈಹಿಕ ಶ್ರಮದ ಜೀವನ ನಡೆಸುತ್ತಿದ್ದರು. ಉದಾಹರಣೆಗೆ  ಕಟ್ಟಿಗೆಗಾಗಿ ಕಾಡಿಗೆ ಹೋಗಿ ಕಡಿದುಕೊಂಡು ಬರುವುದು, ನೀರಿಗಾಗಿ ಮನೆಯಿಮದ ಸ್ವಲ್ಪ ದೂರವಿರುವ ಊರಿನ  ಕೆರೆ, ಕುಂಟೆಗಳಿಂದ ನೀರು ತರುವುದು, ಎಲ್ಲ ತರಹದ ಕೆಲಸಗಳನ್ನ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ವ್ಯವಸಾಯವೂ ಹೆಚ್ಚಾಗಿ ಯಾಂತ್ರೀಕರಣವಾಗುತ್ತಿದೆ. ಹೀಗಾಗಿ ಇದು ಜನರ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.


YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv