ಡ್ರಾಪ್ ನೆಪದಲ್ಲಿ ದರೋಡೆ ಮಾಡ್ತಿದ್ದ ಕುಖ್ಯಾತ ಹೈವೇ ರಾಬರ್ಸ್​ ಅಂದರ್​..!

ಬೆಂಗಳೂರು: ನಗರದ ಕುಖ್ಯಾತ ಹೈವೇ ದರೋಡೆಕೋರರನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸುಲೈಮಾನ್, ಅಬ್ದುಲ್ ಸಾಹಿಲ್ ಹಾಗೂ ಕಲಂದರ್ ಬಂಧಿತರು ಖದೀಮರು. ಬೆಂಗಳೂರು-ಮೈಸೂರು ಹೈವೇಯನ್ನೇ  ಟಾರ್ಗೆಟ್​ ಮಾಡಿದ್ದ ಖದೀಮರು ಬಸ್​ ಸ್ಟ್ಯಾಂಡ್​ಗಳಲ್ಲಿ ಒಂಟಿಯಾಗಿ ನಿಂತವರನ್ನ ಡ್ರಾಪ್​ ಮಾಡ್ತೀವಿ ಬನ್ನಿ ಅಂತಾ ಕಾರು ಹತ್ತಿಸಿಕೊಳ್ತಿದ್ರು. ನಂತರ ಕಾರು ಹತ್ತಿದವರನ್ನ ಮಚ್ಚು ತೋರಿಸಿ ಬೆದರಿಸಿ, ಹಲ್ಲೆ ಮಾಡಿ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚುತ್ತಿದ್ರು. ಬಳಿಕ ನಡು ರಸ್ತೆಯಲ್ಲೇ ಇಳಿಸಿ ಪರಾರಿಯಾಗುತಿದ್ರು. ಇದೇ ರೀತಿ ಕೆಲಸದ ನಿಮಿತ್ತ ಮದ್ದೂರಿಗೆ ಹೊರಟಿದ್ದ ಮಹೇಶ್ ಎಂಬಾತನನ್ನ ಕಾರಿಗೆ ಹತ್ತಿಸಿಕೊಂಡು ಹಲ್ಲೆ ಮಾಡಿ ಹಣ ಮೊಬೈಲ್​ ದೋಚಿದ್ದರು. ಈ ಸಂಬಂಧ ಮಹೇಶ್ ಪೊಲೀಸ್​ ಠಾಣೆ​ ಮೆಟ್ಟಿಲೇರಿದ್ದರು. ಸದ್ಯ ಆರೋಪಿಗಳು ಬ್ಯಾಟರಾಯನಪುರ ಪೋಲಿಸರ ವಶದಲ್ಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv