ನೈಋತ್ಯ ರೈಲ್ವೆಯಲ್ಲಿ ನರ್ಸಿಂಗ್ ಹುದ್ದೆಯ ಆಕಾಂಕ್ಷಿಗಳ ಪರದಾಟ..!

ಧಾರವಾಡ: ನೈಋತ್ಯ ರೈಲ್ವೆ ವಿಭಾಗದಲ್ಲಿ ಕೇವಲ 20 ನರ್ಸಿಂಗ್ ಹುದ್ದೆಗಾಗಿ ಇಂದು ನೇರ ಸಂದರ್ಶನ ನಡೆದಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನರ್ಸಿಂಗ್ ಹುದ್ದೆಯ ಆಕಾಂಕ್ಷಿಗಳು ಆಗಮಿಸಿದ್ದು ಸಂದರ್ಶನ ಸಿಗದೇ ಅವರು ಪರದಾಡುವಂತಾಯಿತು. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ದಕ್ಷಿಣ ಪಶ್ಚಿಮ ರೈಲ್ವೆ ಆಸ್ಪತ್ರೆಯಲ್ಲಿ ಒಂದು ವರ್ಷ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ನಡೆದಿದೆ. ಆದರೆ ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳು ಸಂದರ್ಶನಕ್ಕೆ ಬಂದಿರುವುದರಿಂದ ಬಹಳಷ್ಟು ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಅವಕಾಶ ಸಿಗದೆ ಬರಿಗೈಯಲ್ಲಿ ವಾಪಾಸಾದ್ರು. ಹೆಚ್ಚಿನ ಜನ ನೇಮಕಾತಿಗೆ ಬಂದಿದ್ದರಿಂದ ಕೆಲ ಕಾಲ ಆಸ್ಪತ್ರೆಯ ಆವರಣ ಗೊಂದಲದ ಗೂಡಾಗಿತ್ತು. ಇದೇ ವೇಳೆ ಕೆಲವು ಆಕಾಂಕ್ಷಿಗಳು ರೈಲ್ವೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv