ರದ್ದಾಗಲಿಲ್ಲ ಎನ್​​ಪಿಎಸ್​​​​ ಯೋಜನೆ -ಬಜೆಟ್​​​ ವಿರುದ್ಧ ಗರಂ ಆದ ನೌಕರರು

ಬೆಂಗಳೂರು: ರಾಜ್ಯ ಸರ್ಕಾರ 2019-20 ನೇ ಸಾಲಿನ ಬಜೆಟ್​​​ನಲ್ಲಿ ಎನ್​​ಪಿಎಸ್​​​​ ಯೋಜನೆಯನ್ನು ರದ್ದು ಪಡಿಸುವ ವಿಷಯದಲ್ಲಿ ಯಾವುದೇ ಪ್ರಸ್ತಾಪ ಮಾಡದೇ ಇರುವುದನ್ನ ರಾಜ್ಯ ಎನ್​​ಪಿಎಸ್​​​​ ನೌಕರರು ಖಂಡಿಸುತ್ತಾರೆ ಎಂದು ಎನ್​​ಪಿಎಸ್​​​​ ನೌಕರರ ಸಂಘದ ರಾಜ್ಯಾಧ್ಯಾಕ್ಷ ಶಾಂತಾರಾಮ ತಿಳಿಸಿದ್ದಾರೆ.

ಬಜೆಟ್​​ನಲ್ಲಿ ಸಿಎಂ ಕುಮಾರಸ್ವಾಮಿಯವರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಅವರು ನಮ್ಮ ವಿಶ್ವಾಸವನ್ನ ಹುಸಿಗೊಳಿಸಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ, ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ನಮ್ಮ ಸಂಘಕ್ಕೆ ನೀಡಿರುವ ಭರವಸೆಯನ್ನ ಬಜೆಟ್​​ನಲ್ಲಿ ಈಡೇರಿಸದೇ ಇರುವುದನ್ನ ಎನ್​​ಪಿಎಸ್​​​​ ಸಂಘವು (NPS -National Pension System) ಖಂಡಿಸುತ್ತದೆ. ಬಜೆಟ್​​​​​ನಲ್ಲಿ ಎನ್​​ಪಿಎಸ್​​​​ ಯೋಜನೆಯನ್ನ ರದ್ದುಗೊಳಿಸದೇ ಇರುವ ಸರ್ಕಾರದ ಕ್ರಮದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಅಣಿಯಾಗಲಿದೆ ಎಂದು ಶಾಂತಾರಾಮ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv