ದೋಸ್ತಿ ಸರ್ಕಾರದ ಮೇಲೆ ಬಿಜೆಪಿ ‘ಸಿಡಿ’ ಅಸ್ತ್ರ..!

ಬೆಂಗಳೂರು: ಆಪರೇಷನ್​ ಕಮಲದ ಆಡಿಯೋ ಬಿಡುಗಡೆ ಮಾಡಿದ ದೋಸ್ತಿ ಸರ್ಕಾರದ ವಿರುದ್ಧ ಬಿಜೆಪಿ ಸಿಡಿ ಅಸ್ತ್ರ ಬಿಟ್ಟಿದೆ. ಆಪರೇಷನ್​ ಕಮಲದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿ ರಾಜ್ಯರಾಜಕಾರಣದಲ್ಲಿ ಕೋಲಾಹಲ ಹುಟ್ಟಿಸಿದ ಬೆನ್ನಲ್ಲೇ ಬಿಜೆಪಿ ಸಿಡಿ ಅಸ್ತ್ರ ಪ್ರಯೋಗಿಸಿದೆ.

2014 ರಲ್ಲಿ ಕುಮಾರಸ್ವಾಮಿ ವಿಜಯಪುರದ ಮುಖಂಡರೊಬ್ಬರನ್ನು ವಿಧಾನಪರಿಷತ್ ಸದಸ್ಯ ಮಾಡುವುದಾಗಿ ತಿಳಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ರಂತೆ. ಪ್ರತಿ ಶಾಸಕರಿಗೂ ಒಂದೊಂದು ಕೋಟಿ ಹಾಗೂ ತಮಗೆ ಹಣ ಕೊಟ್ಟರೆ, ನಿನ್ನನ್ನು ವಿಧಾನಪರಿಷತ್ ಸದಸ್ಯ ಮಾಡುತ್ತೇನೆಂದು ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದರಂತೆ. ಈ ಕುರಿತಾದ ಸಿಡಿಯನ್ನು ಶಾಸಕ ಎಂ.ಪಿ.ರೇಣುಖಾಚಾರ್ಯ ಇಂದು ಸದನದಲ್ಲಿ ತೋರಿಸಿ, ₹40 ಕೋಟಿ ರೂಪಾಯಿಯ ಸಿಡಿ ಇದು ಇದರ ಬಗ್ಗೆಯೂ ಚರ್ಚೆಯಾಗಲಿ ಅಂತಾ ಆಗ್ರಹಿಸಿದ್ರು. ನಂತರ ಸಿಡಿಯನ್ನ ಸ್ಪೀಕರ್​ ರಮೇಶ್​ ಕುಮಾರ್​ಗೆ ನೀಡಿದ್ರು.

 


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv