ನಟಿ, ಮಾಡೆಲ್​ ಅಷ್ಟೇ ಅಲ್ಲ, ಇನ್ವೆಸ್ಟರ್​​ ಆಗಿಯೂ ಕಮಾಲ್ ಮಾಡ್ತಿದ್ದಾರೆ ದೀಪಿಕಾ..!

ಬಾಲಿವುಡ್​ನ ಟಾಪ್ ನಟಿ ದೀಪಿಕಾ ಪಡುಕೋಣೆ ಕೇವಲ ನಟನೆಯಲ್ಲಿ ಮಿಂಚ್ತಿರೋದಷ್ಟೇ ಅಲ್ಲ, ಇನ್ವೆಸ್ಟರ್​​ ಆಗಿಯೂ ಗುರುತಿಸಿಕೊಳ್ತಿದ್ದಾರೆ. ಪಡುಕೋಣೆ ಫ್ಯಾಮಿಲಿ ಆಫೀಸ್​ ನಿರ್ವಹಣೆ ಮಾಡೋ ಕೆಎ ಎಂಟರ್​​ಪ್ರೈಸಸ್,​​ ಶುರುವಾದ 18 ತಿಂಗಳಲ್ಲೇ ಅನೇಕ ಸ್ಟಾರ್ಟ್​​ ಅಪ್​​ ಕಂಪನಿಗಳಲ್ಲಿ ಇನ್ವೆಸ್ಟ್​ ಮಾಡಿದೆ. ಫರ್ನೀಚರ್​​ ಬಾಡಿಗೆ ತಾಣವಾದ ಫುರ್ಲೆಂಕೋ ಹಾಗೂ ಬ್ಯೂಟಿ ಪ್ರಾಡಕ್ಟ್​​​ಗಳ ಆನ್​ಲೈನ್​​​ ತಾಣ ಪರ್ಪಲ್​​ನಲ್ಲಿ ಕೆಎ ಎಂಟರ್​ಪ್ರೈಸಸ್​ ಹೂಡಿಕೆ ಮಾಡಿದೆ. ಇತ್ತೀಚೆಗೆ ಮೊಸರು ಉತ್ಪಾದಕ ಸಂಸ್ಥೆ ಎಪಿಗಾಮಿಯಾದಲ್ಲೂ ಇನ್​​​​ವೆಸ್ಟ್​ ಮಾಡಿದೆ.

ದೀಪಿಕಾ ಪಡುಕೋಣೆ ಈಗಾಗಲೇ ‘ಆಲ್​ ಅಬೌಟ್​ ಯೂ’ ಅನ್ನೋ ಉಡುಪುಗಳ ಬ್ರ್ಯಾಂಡ್​​ಗೆ ಕೋ-ಓನರ್​ ಆಗಿದ್ದಾರೆ. ಈವರೆಗೆ ಅವರ ಇತರೆ ಇನ್ವೆ​ವೆಸ್ಟ್​​ಮೆಂಟ್​​ಗಳ ಬಗ್ಗೆ ಸಾರ್ವಜನಿಕವಾಗಿ ಗೊತ್ತಿರಲಿಲ್ಲ. ಮಾಜಿ ಇನ್ವೆಸ್ಟ್​​ಮೆಂಟ್​ ಬ್ಯಾಂಕರ್​ ನಿತಿನ್ ಕಂಚನ್​ ಅನ್ನೋರು ಕೆಎ ಎಂಟರ್​ಪ್ರೈಸಸ್​​ನ ಸಿಇಓ ಆಗಿದ್ದು, ದೀಪಿಕಾಗಾಗಿ ಇನ್ವೆಸ್ಟ್​​ಮೆಂಟ್​​ಗಳನ್ನ ನೋಡಿಕೊಳ್ತಾರೆ. ಈ ಸಂಸ್ಥೆ ಸ್ಟಾರ್ಟ್​​ ಅಪ್​​ಗಳಲ್ಲಿ ಎಷ್ಟು ಹಣ ಹೂಡಿಕೆ ಮಾಡಿದೆ ಎಂಬುದನ್ನ ಬಹಿರಂಗಪಡಿಸಲು ನಿತಿನ್ ನಿರಾಕರಿಸಿದ್ದಾರೆ. ಆದ್ರೆ ಇದು ಬಹು ಕೋಟಿ ಮೊತ್ತದ ಹೂಡಿಕೆ ಎಂದು ಹೇಳಿದ್ದಾರೆ.

ಅಂದ್ಹಾಗೆ ದೀಪಿಕಾ, 2018ರ ಫೋರ್ಬ್ಸ್​ ಪಟ್ಟಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟಿಯರ ಪೈಕಿ ಏಕೈಕ ಮಹಿಳೆಯಾಗಿದ್ರು. ಈ ಹಿಂದೆಯೂ ಸಾಕಷ್ಟು ಕ್ರಿಕೆಟರ್​ಗಳು ಹಾಗೂ ನಟ-ನಟಿಯರು ವಿವಿಧ ಸ್ಟಾರ್ಟ್​​ ಅಪ್​​ಗಳಿಗೆ ಬ್ರ್ಯಾಂಡ್​​ ಅಂಬಾಸಿಡರ್​ ಆಗಿರೋದುಂಟು. ಆದ್ರೆ ದೀಪಿಕಾ ಇತರೆ ಸಾಮಾನ್ಯ ಇನ್​​​ವೆಸ್ಟರ್​​​ಗಳಂತೆ ಸ್ಟಾರ್ಟ್​ ಅಪ್​​ಗಳಲ್ಲಿ ಹಣ ಹೂಡಿಕೆ ಮಾಡ್ತಿರೋದ್ರಿಂದ ವಿಭಿನ್ನವಾಗಿ ನಿಲ್ತಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv