ವಿರಾಟ್​ ಕೊಹ್ಲಿ ಈ ಕೋಳಿ ತಿನ್ನೋದು ಒಳ್ಳೆಯದಂತೆ..!

ಕ್ರಿಕೆಟ್​ ಫೀಲ್ಡ್​ನಲ್ಲಿ ಸಿಕ್ಕಸಿಕ್ಕ ಬೌಲರ್​ಗಳ ಬೆವರಿಳಿಸಿ ಭರ್ಜರಿ ಬ್ಯಾಟಿಂಗ್​ ಮಾಡೋ ಕೊಹ್ಲಿಗೆ ಊಟದ ವಿಷ್ಯದಲ್ಲಿ ಬಾಟಿಂಗ್​ ಮಾಡೋದು ಅಂದರೆ ಸಖತ್​ ಪ್ರಾಬ್ಲಮ್​ ಆಗ್ಬಿಟ್ಟಿದೆಯಂತೆ. ಈ ಕಡೆ ಫಿಟ್ನೆಸ್​ ಕಾಪಾಡ್ಕೊಂಡು, ಆ ಕಡೆ ಬಾಯಿ ರುಚಿನೂ ಮೇಂಟೇನ್​ ಮಾಡ್ಕೊಳ್ಳೋಕೆ ಆಗದೆ, ಕೊನೆಗೆ ಹುರಳಿ ಸೊಪ್ಪು-ಬಸ್ಸಾರು ಅಂತಾ ವೆಜಿಟೇರಿಯನ್​ ಆಗ್ಬಿಟ್ರಿದ್ರು. ಆದ್ರೀಗ ಅವರ ಈ ಸಸ್ಯಹಾರಿ ಜಪ ಮುರಿಯೋಕೆ ಬಂಪರ್​ ಆಫರ್ ವೊಂದು ಕೊಹ್ಲಿಯನ್ನ ಹುಡ್ಕೊಂಡು ಬಂದಿದೆ.

ಟೇಸ್ಟಿ ಟೇಸ್ಟಿ ಫುಡ್​ಗಳನ್ನ ಸವಿಯೋಕೆ ಜನುಮವೇ ಸಾಲಲ್ಲ ನಿಜ. ಆದರೆ, ಕ್ಯಾಪ್ಟನ್​ ಕೊಹ್ಲಿಗೆ ಟೇಸ್ಟಿ ಫುಡ್​ಗಳನ್ನ ತಿನ್ಬೇಕು ಅನ್ನೋ  ಆಸೆ ಬೆಟ್ಟದಷ್ಟು ಇದ್ರೂ ಸಾಧ್ಯವಾಗ್ತಿಲ್ಲ. ಕಾರಣ ಫಿಟ್ನೆಸ್​. ಎಷ್ಟೆಲ್ಲಾ ವ್ಯಾಯಾಮ, ಎಕ್ಸರ್ಸೈಜ್​​ ಅಂತಾ ಮಾಡಿದ್ರೂ, ಫಿಟ್​ ಌಂಡ್​ ಫೈನ್​ ಆಗಿರೋಕೆ ಆಗ್ತಿಲ್ಲ ಅಂತಾ ಕೊಹ್ಲಿ ಇತ್ತೀಚೆಗಷ್ಟೆ ನಾನು ನಾನ್​ವೆಜ್​ನಿಂದ ವೆಜ್​​​ಗೆ ಶಿಫ್ಟ್​ ಆಗ್ತಿದ್ದೇನೆ ಅಂತಾ ಊಟದ ಮೆನುವನ್ನೇ ಚೇಂಜ್​ ಮಾಡ್ಬಿಟ್ಟಿದ್ರು. ಅಷ್ಟೆ  ಅಲ್ಲದೇ ತಮ್ಮಿಷ್ಟದ ಬಟರ್​ ಚಿಕನ್​ಗೆ ಗುಡ್​ ಬೈ ಹೇಳಿದ್ರು.

ಬಟರ್​ ಚಿಕನ್​ ಬದಲಿಗೆ ಕೊಹ್ಲಿಗೆ ಬಂತು ಕೋ.. ಕೋ.. ಗಿಫ್ಟ್ ​
ಹೌದು, ರನ್​ ಮಷಿನ್​ಗೀಗ ಹೊಸ ಫಿಟ್ನೆಸ್​ ಪ್ರಪೋಸಲ್​ ಇರೋ ಕೋಳಿಯ ಆಹ್ವಾನ ಬಂದಿದೆ. ಕಡಕ್​ನಾಥ್​ ಚಿಕನ್​ನಲ್ಲಿ ಕೊಲೆಸ್ಟ್ರಾಲ್ ಹಾಗೂ ದೇಹದ​ ತೂಕ ಕಡಿಮೆ ಮಾಡುವ ಅಂಶವಿದೆ. ಹೀಗಾಗಿ ನೀವು ಇದನ್ನು ಸೇವಿಸಿ ಎಂದು ಮಧ್ಯಪ್ರದೇಶದ ಝಬುವಾದ ಕೃಷಿ ವಿಜ್ಞಾನ ಕೇಂದ್ರವು ವಿರಾಟ್​ ಕೊಹ್ಲಿಗೆ ಪತ್ರ ಬರೆದಿದೆ.

ಇಷ್ಟೆ ಅಲ್ಲ ಈ ಕುರಿತು ಬಿಸಿಸಿಐಗೂ ಪತ್ರ ಬರೆದಿರುವ ಕೃಷಿ ವಿಜ್ಞಾನ ಕೇಂದ್ರ, ಸಮೀಕ್ಷೆ ಪ್ರಕಾರ ಇದರಲ್ಲಿ ಹಲವು ಪ್ರೊಟಿನ್ಸ್​ ಹಾಗೂ ಕಬ್ಬಿಣಾಂಶದ ಕಂಟೆಂಟ್​ ಇದೆ. ಹೀಗಾಗಿ ನೀವು ಮತ್ತು ನಿಮ್ಮ ತಂಡದವರು ಖಡಕ್​ನಾಥ್​ ಚಿಕನ್​​ ಸೇವಿಸಿ ಅಂತಾ ಅಂಕಿ ಸಂಖ್ಯೆ ದಾಖಲೆ ಇಟ್ಟು ಶಿಫಾರಸ್ಸು ಮಾಡಿದೆ.

ಇಷ್ಡು ದಿನ ಬರೀ ಹಸಿ ತರಕಾರಿ, ಕಾಳು ತಿಂತಿದ್ದ ಕೊಹ್ಲಿ ಇದಕ್ಕೆ ಹೇಗೆ ರೆಸ್ಪಾನ್ಸ್​ ಮಾಡ್ತಾರೆ ಗೊತ್ತಿಲ್ಲ. ಟೀಂ ಇಂಡಿಯಾದ 11ರ ಬಳಗಕ್ಕೆ ಖಡಕ್​ನಾಥ್​ ಕೋಳಿ ತಿನ್ನಿ ಅಂತಾ ಶಿಫಾರಸ್ಸು ಮಾಡುತ್ತಾ ?  ಗೊತ್ತಿಲ್ಲ. ಆದರೆ, ಈ ಆಹ್ವಾನದ ಹಿಂದೇ ಖಡಕ್​ನಾಥ್​ ಕೋಳಿಯ ಖಡಕ್​ ಪ್ರಚಾರದ ಐಡಿಯಾ ಇರೋದಂತೂ  ಪಕ್ಕಾ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv