ದಿನ ,ವಾರ, 15 ದಿನ , ತಿಂಗಳಿಗೊಮ್ಮೆ ಕುಡಿಯೋರೂ.. ಈ ಸ್ಟೋರಿ ಓದ್ಲೇಬೇಕು!

ದಿನ ಕುಡಿಯೋರು, ವಾರಕ್ಕೊಮ್ಮೆ ಕುಡಿಯೋರು, 15 ದಿನಕ್ಕೊಮ್ಮೆ ಕುಡಿಯೋರು, ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಷ್ಟೇ ಅಲ್ಲ, ನ್ಯೂ ಇಯರ್‌ ಪಾರ್ಟಿಯಲ್ಲಿ ಕುಡಿಯೋರು ಕೂಡ ಈ ಸ್ಟೋರಿ ಓದಲೇಬೇಕು. ತಿಂಗಳಿಗೊಮ್ಮೆನೋ, 6 ತಿಂಗಳಿಗೊಮ್ಮೆಯೋ ಕುಡಿದ್ರೆ ಏನೂ ಆಗೋದಿಲ್ಲ ಅಂತಾ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪೋ ತಪ್ಪು. ಯಾಕಂದ್ರೆ, ಆಲ್ಕೋಹಾಲ್‌ ಸೇವನೆ ಬಗ್ಗೆ ನಡೆದಿರೋ ಅಧ್ಯಯನದ ಫಲಿತಾಂಶ ಏನು ಅಂತಾ ಗೊತ್ತಾದ್ರೆ ನೀವೇ ಶಾಕ್ ಆಗ್ತೀರಾ.
ಅತಿಯಾದ ಕುಡಿತವಷ್ಟೇ ಅಲ್ಲ, ಸಣ್ಣ ಪ್ರಮಾಣದಲ್ಲಿ ಮದ್ಯಪಾನ ಮಾಡಿದರೂ ಕಾಯಿಲೆಗಳಿಗೆ ತುತ್ತಾಗಬಹುದು ಅಂತ ಹೊಸ ಅಧ್ಯಯನವೊಂದು ಹೇಳಿದೆ.

195 ರಾಷ್ಟ್ರಗಳಲ್ಲಿ ಈ ಸಂಶೋಧನೆ ನಡೆಸಲಾಗಿದ್ದು, ವಾರ್ಷಿಕವಾಗಿ 2.8 ಮಿಲಿಯನ್​ ಸಾವುಗಳು ಕುಡಿತದಿಂದ ಸಂಭವಿಸುತ್ತವೆ ಎನ್ನುವ ಆಘಾತಕಾರಿ ವಿಷಯವನ್ನು ಹೊರಹಾಕಿದೆ. ಕುಡಿತಕ್ಕೆ ಯಾವುದೇ ರೀತಿಯ ಸುರಕ್ಷಿತ ಹಂತ ಎನ್ನುವುದಿಲ್ಲ ಎನ್ನುತ್ತಾರೆ ವಾಷಿಂಗ್ಟನ್​​ನ ಹೆಲ್ತ್​​​ ಮೆಟ್ರಿಕ್ಸ್​​​ ಹಾಗೂ ಎವಾಲ್ಯುಯೇಷನ್ ಸಂಸ್ಥೆಯ ಸಂಶೋಧಕ ಮ್ಯಾಕ್ಸ್​ ಗ್ರಿಸ್​​ವೋಲ್ಡ್. ಸಣ್ಣ ಪ್ರಮಾಣದ ಕುಡಿತವೂ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುತ್ತದೆ ಮೆಡಿಕಲ್​ ಜರ್ನಲ್​ ‘ದಿ ಲನ್ಸೆಂಟ್’​ನಲ್ಲಿ ಪ್ರಕಟವಾದ ಲೇಖನ.
10 ಗ್ರಾಂ ಆಲ್ಕೋಹಾಲ್​ ಅಂದ್ರೆ ಒಂದು ಸಣ್ಣ ಬಿಯರ್ ಕ್ಯಾನ್​, ಒಂದು ಗ್ಲಾಸ್​​ ವೈನ್​ ಅಥವಾ ಸ್ಪಿರಿಟ್​​ ಸಮ. ಅಲ್ಲದೇ ಇದು ಮನುಷ್ಯನ ಕ್ರಿಯಾಶೀಲತೆಯನ್ನು ಕಡಿಮೆ ಮಾಡುವುದರ ಜೊತೆಗೆ ಸರಣಿ ರೋಗಗಳನ್ನು ತಂದೊಡ್ಡುತ್ತದೆ ಎನ್ನುತ್ತಾರೆ ಹಲವು ಸಂಶೋಧಕರು.

ಇನ್ನು, 2016ರಲ್ಲಿ ಅಕಾಲಿಕ ಮರಣ ಹಾಗೂ ಕಾಯಿಲೆಗಳಿಗೆ ಕಾರಣವಾಗುವ ಅಂಶಗಳಲ್ಲಿ ಮದ್ಯಪಾನ 7ನೇ ಸ್ಥಾನದಲ್ಲಿದೆ. ಟಾಪ್ 6 ಸ್ಥಾನಗಳಲ್ಲಿ ಬಿಪಿ, ಸ್ಮೋಕಿಂಗ್, ಲೋ ಬರ್ತ್​​​ ವೇಯ್ಟ್​​, ಅವಧಿ ಪೂರ್ವ ಹೆರಿಗೆ, ಹೈ ಬ್ಲಡ್​ ಶುಗರ್​​, ಸ್ಥೂಲಕಾಯ ಹಾಗೂ ಮಾಲಿನ್ಯ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv